ಮೂಡುಬಿದರೆ: 2013-14ನೇ ಸಾಲಿನ ಪುರಸಭಾ ನಿಧಿಯಿಂದ 3 ವಾರ್ಡ್‍ಗಳಲ್ಲಿ ನಿರ್ಮಿಸಿದ ಬಸ್ 8.45 ಲಕ್ಷ ಅನುದಾನ 3 ಬಸ್ ತಂಗುದಾಣ ಹಾಗೂ ಹೊಸ ಕೋರ್ಟ್ ರಸ್ತೆಯನ್ನು ಸೋಮವಾರ ಉದ್ಘಾಟಿಸಲಾಯಿತು.
mbd_march2_3(a)

mbd_march2_3
ಕಲ್ಲಬೆಟ್ಟು 19ನೇ ವಾರ್ಡ್ ಮಾರಿಗುಡಿ ಬಳಿಯಲ್ಲಿ 2.30 ಲಕ್ಷ ಅನುದಾನ, ಅದೇ ವಾರ್ಡಿನಲ್ಲಿ 2.55 ಲಕ್ಷ ವೆಚ್ಚದ ಬಸ್‍ನಿಲ್ದಾಣ ಹಾಗೂ 3.60 ಲಕ್ಷ ವೆಚ್ಚದಲ್ಲಿ ಕೋಟೆಬಾಗಿಲು ವಾರ್ಡಿನ ಬಸ್ ತಂಗುದಾಣ ಲೋಕಾರ್ಪಣೆಗೊಳಿಸಲಾಯಿತು. 5 ಲಕ್ಷ ವೆಚ್ಚದಲ್ಲಿ ಡಾಮರೀಕರಣಗೊಂಡ 19ನೇ ವಾರ್ಡ್‍ನ ಹೊಸ ಕೋರ್ಟ್ ರಸ್ತೆಯನ್ನು ಉದ್ಘಾಟನೆಗೊಂಡಿದೆ. ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಬಸ್‍ನಿಲ್ದಾಣ, ಕೋರ್ಟ್ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು.
ಪುರಸಭಾ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಅನಿಲ್ ಲೋಬೋ, ರಮಣಿ, ರಾಜೇಶ್ ಕೋಟೆಗಾರ್,ಪಿ.ಕೆ ಥೋಮಸ್, ಅಲ್ವಿನ್ ಮೆನೇಜಸ್, ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್, ಇಂಜಿನಿಯರ್ ದಿನೇಶ್, ಸಿಬ್ಬಂದಿ ಸುಧೇಶ್ ಹೆಗ್ಡೆ, ಗುತ್ತಿಗೆದಾರ ಗಿರೀಶ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *