ಸುದ್ದಿ9 ಪೊಳಲಿ: ಪೊಳಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತಿ ಹೊಂದಿದ ಪೊಳಲಿ ದಿವಾಕರ ಅಚಾರ್ಯ( 65 ವ )ಅವರು ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಫೆ.22ರಂದು ಭಾನುವಾರ ನಿಧನ ಹೊಂದಿದರು.
divakara acharya nidhana
ಅವರು ರಾಜಶ್ರೀ ಯವಕ ಮಂಡಲದ ಗೌರವ ಸಲಹೆಗಾರರಾಗಿ ಹಾಗೂ ಪೊಳಲಿ ವಿದ್ಯಾವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೃತರು ಪತ್ನಿ ಶೋಭಾ ಪುತ್ರ ಸುಧೀರ್ ಕುಮಾರ್, ಪುತ್ರಿಯರಾದ ಶ್ರೀಮತಿ ಸುಪ್ರೀಯ ಸೋಮಶೇಖರ್ ತಚ್ಚೇರಿ ಮತ್ತು ಕುಮಾರಿ ಶ್ವೇತಾ ಅವರನ್ನು ಅಗಲಿದ್ದಾರೆ. ಪ್ರಕಾಶ್, ಇವರ ನಿಧನಕ್ಕೆ ಪೊಳಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರು ನಿದರ್ೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಬ್ಬಂದಿ ವರ್ಗ ಮತ್ತು ರಾಜಶ್ರೀ ಯುವಕ ಮಂಡಲದ ಅಧ್ಯಕ್ಷರು ಹಾಗೂ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

By suddi9

Leave a Reply

Your email address will not be published. Required fields are marked *