ಸುದ್ದಿ9ಕೈಕಂಬ: ಮಳಲಿಯ ಉಳಿಪಾಡಿಗುತ್ತುವಿನಲ್ಲಿ ಫೆ.26ರ ರಾತ್ರಿ 11 ಗಂಟೆಗೆ ಕೊಡಮಣಿತ್ತಾಯ(ಕೊಡಮಣಮಂದಾಯ) ದೈವಕ್ಕೆ ಧರ್ಮನೇಮ ಜರುಗಿತು. ಈ ಧರ್ಮನೇಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಈ ಧರ್ಮನೇಮ ಸೇವೆಯನ್ನು ಮಳಲಿ ಸೀಮೆ ಭಕ್ತರ ಹಾಗೂ ಉಳಿಪಾಡುಗುತ್ತು ಕುಟುಂಬಿಕರ ಪರವಾಗಿ ನೀಡಲಾಗಿತ್ತು.
ಕಂಚಿನ ಹಾಗೂ ಬೆಳ್ಳಿಯ ಆಭರಣವನ್ನು ಧರಿಸಿ, ಸಿರಿ ಹಾಗೂ ಹಾಳೆಯನ್ನು ಧರಿಸಿಕೊಂಡು ನಿಂತಿದ್ದ ಕೊಡಮಣಿತ್ತಾಯ ಅಬ್ಬರಿಸಿ ಬೊಬ್ಬಿರಿಸಿ ನೆರೆದಿದ್ದ ಮಳಲಿ ಸೀಮೆಯ ಜನರ ಸಂಕಷ್ಟಗಳನ್ನು ಹೋಗಲಾಡಿಸುವುದಾಗಿ ಅಭಯ ನೀಡಿದ.
ಬೆಳಿಗ್ಗೆ ದೈವದರ್ಶನ, ಮಾಣಚ್ಚಿಲ್, ಬಿಂಬ ಪ್ರತಿಷ್ಠ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಭಕ್ತರಿಗೆ ಪ್ರಸಾದ ರೂಪವಾಗಿ ನಿರಂತರ ಅನ್ನದಾನ ನಡೆದಿದ್ದು ವಿಷೇಷವಾಗಿತ್ತು. ಒಂದೇ ದಿನ 25 ಸಾವಿರಕ್ಕಿಂತಲೂ ಅನ್ನದಾನ ಸ್ವೀಕರಿಸಿದ್ದು ದಾಖಲೆ ಎನಿಸಿತ್ತು.
ಉಲಿಪಾಡಿಗುತ್ತು ದೈವಸ್ಥಾನದ ಬಳಿಯಿಂದ ದೈವವನ್ನು ಕರೆದಕೊಂಡು ಉಳಿಪಾಡಿಗುತ್ತುವಿನ ಸಿಂಗಾರ ಮಂಟಪದಲ್ಲಿ ಪ್ರತಿಷ್ಠೆ ಮಾಡಲಾಗಿತ್ತು. ಇದೇ ಸೇವೆಯಲ್ಲಿ ದೈವದ ನರ್ತನ ಸೇವೆ ನಡೆಯಿತು.
ಎಲ್ಲೆಲ್ಲೂ ಸ್ವಯಂಸೇವಕರು: ಧರ್ಮನೇಮೋತ್ಸವಕ್ಕೆಂದು ಸೇವೆ ಸಲ್ಲಿಸಿಲು ಮಳಲಿಯಿಂದ ಹಾಗೂ ಹೊರ ಊರಿನಿಂದ ಸಾವಿರಾರು ಮಂದಿ ಸ್ವಯಂಸೇವಕರು ಪಾಲ್ಗೊಂಡು ದೈವದ ಕೃಪೆಗೆ ಪಾತ್ರರಾದರು. ಎಲ್ಲೆಲ್ಲೂ ಕೇಸರಿ ಬಣ್ಣದ ಶಾಲನ್ನು ಧರಿಸಿದ ಯುವಕರೇ ಕಂಡುಬರುತ್ತಿದ್ದರು.
ಧರ್ಮನೇಮಕ್ಕೆ, ಉಳಿಪಾಡಿಗುತ್ತುವಿನ ಕುಟುಂಬಿಕರು, ಬಿ. ನಾಗರಾಜ್ ಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ತಾರನಾಥ ಆಳ್ವ ,ಗೋಳಿದಡಿಗುತ್ತು ವರ್ಧಮಾನ್ ದುರ್ಗಾಪ್ರಸಾದ್ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು



























Namma urudha suddhi theripavuna onji Edde Mahithi kendra niklena nanalth Edde vishayanu theripavuna namma idi uru gurithisavuna Samsthe avadu …