ಬಜಪೆ : ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಬಡಗ ಎಡಪದವು ಮಿಜಾರು ಇದರ ಆಶ್ರಯದಲ್ಲಿ ನಮ್ಮ ಟಿವಿ ವಾಹಿನಿಯ ಸಹಭಾಗಿತ್ವದಲ್ಲಿ ಯೆಯಾ ಹಾಸಯಾ. ಕೊಂಕಂಣಿ ಹಾಸ್ಯ ಸ್ಪರ್ಧಾ ಸರಣಿಯ ಅರ್ಹತಾ ಸುತ್ತಿನ ಎರಡನೇ ಅವತರಣಿಕೆ ಫೆ.21ರಂದು ಶನಿವಾರ ಆರಂಭಗೊಂಡಿತು.
ಆರಂಭಿಕವಾಗಿ ಅಂಕೋಲ ಹಳುವಳ್ಳಿಯ ಸಿದ್ದಿ ಗೆಳೆಯರ ಬಳಗ. ಸಿದ್ದಿ ಜನಾಂಗಕ್ಕೆ ಸಂಬಂಸಿದಂತೆ ಹಾಸ್ಯ ಪ್ರಹಸನವನ್ನು ಪ್ರಸ್ತುತ ಪಡಿಸಿತು.
bhootha

21-vm bhutanatha 2

 

9

yeya ashaya konkani hasya

8

5

6
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಅವರು ಸ್ಪರ್ಧಾ ಸರಣಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ ಜನರಿಗೆ ಮನರಂಜನೆ ನೀಡುವುದರ ಜತೆಗೆ ಹಿನ್ನೆಲೆಯಲ್ಲಿ ಅಡಗಿ ಹೋದ ವ್ಯಕ್ತಿಯಲ್ಲಿ ಕಲಾ ಮನಸುಗಳನ್ನು ಕೆದರೆ ಆತನನ್ನು ಉತ್ಖೃಷ್ಟ ಕಲಾವಿದನನ್ನಾಗಿ ರೂಪಿಸುವಲ್ಲಿ “ಬಲೆ ತೆಲಿಪಾಲೆ” ಹಾಗೂ “ಯೆಯಾ ಹಾಸಯಾ” ಪರಿಣಾಮಕಾರಿ ವೇದಿಕೆಗಳಾಗಿವೆ. ಎಲ್ಲಾ ಸಂಸೃತಿಗಳನ್ನು ಪ್ರೀತಿಸುವ ಗುಣ ನಾವು ರೂಢಿಸಿಕೊಳ್ಳಬೇಕು ಎಂಬುದನ್ನು ವಿಜಯಾನಾಥ ಶೆಟ್ಟಿ ಅವರು ಪಾಲಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ಅವರು ರಾಯ್ ಕ್ಯಾಸ್ಟಲಿನೊ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು.
*ರಾಕ್ಣೋ* ಕೊಂಕಣಿ ಪತ್ರಿಕಾ ಸಂಪಾದಕ ಫಾ| ಪ್ರಾನ್ಸಿಸ್ ರೊಡ್ರಿಗಸ್, ಎಕ್ಸ್ಪರ್ಟ್ ಸಂಸ್ಥೆಯ ನಿರ್ಧೇಶಕಿ ಪ್ರೂ| ಉಷಾ ಎಲ್. ನಾಯಕ್, ಪ್ರಸಿದ್ದ ಕೊಂಕಣಿ ಹಾಸ್ಯ ಕಲಾವಿದ .ಡೊಳ್ಳ. , ಕಲಾವಿದ ವಿಲ್ಪಿ ಸಲ್ಡಾನ, ವಿಜಯನಾಥ ವಿಠಲ ಶೆಟ್ಟಿ ಅವರು ತೀರ್ಪೂಗಾರರಾಗಿದ್ದರು.
ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ತ್ರರ್ ದೇವದಾಸ ಪೈ, ನಮ್ಮ ಟಿವಿ ಮುಖ್ಯಸ್ಥ ಶಿವಶರಣ್ ಶೆಟ್ಟಿ, ಸುಭಾಸ್ ರಾವ್, ದೀಪ್ತಿ, ಸುಕುಮಾರ್ ಉಪಸ್ಥಿತರಿದ್ದರು. ನಾಗೇಂದ್ರ ಶೆಣೈ ಕಾರ್ಯಕ್ರಮ ಸಂಯೋಜಿಸಿದರು.

By suddi9

Leave a Reply

Your email address will not be published. Required fields are marked *