ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೈಕಂಬ: ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಾಳೆ(22.2.15) ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಬೈಕ್ ರ್ಯಾಲಿ ನಡೆಯಲಿದೆ. ಸುಂಕದಕಟ್ಟೆಯಿಂದ ಹೊರಡುವ ಈ ಬೈಕ್ ರ್ಯಾಲಿ ಗುರುಪುರ ಕೈಕಂಬ ಮುಖಾಂತರ ಗುರುಪುರಕ್ಕೆ ಸಾಗಿ ಅಲ್ಲಿಂದ ವಾಮಂಜೂರಿಗೆ ತಲುಪಲಿದೆ. ಅಲ್ಲಿಂದ ಮೂಡುಶೆಡ್ಡೆಯಲ್ಲಿ ಈ ರ್ಯಾಲಿ ಸಮಾಪ್ತಿಗೊಳ್ಳಲಿದೆ. ಈ ಬೈಕ್ ರ್ಯಾಲಿಯನ್ನು ಗುರುಪುರ ಪ್ರಖಂಡ ಬಜರಂಗದಳ ಹಮ್ಮಿಕೊಂಡಿದೆ ಎಂದು ಬಜರಂಗದಳದ ವಕ್ತಾರರು ತಿಳಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಮಟ್ಟದ ರ್ಯಾಲಿ ನಡೆಯಲಿದೆ. ಈ ಹಿಂದೆ ಬಜರಂಗದಳ ಬೈಕ್ ರ್ಯಾಲಿ ನಡೆಸುವುದಾಗಿ ಹೇಳಿಕೊಂಡಿತ್ತು. ಆದರೆ ಬಜ್ಪೆ ಪೊಲೀಸರ ಅನುಮತಿ ಸಿಗದ ಕಾರಣ ಅದನ್ನು ಮುಂದೂಡಲಾಗಿತ್ತು.

By suddi9

Leave a Reply

Your email address will not be published. Required fields are marked *