
ಸಂಘನಿಕೇತನದಲ್ಲಿ ಬಿಜೆಪಿ ದಕ್ಷಿಣ ವಿಧಾನಸಭಾಕ್ಷೇತ್ರದ ಕಾರ್ಯಕರ್ತರ ಸಭ
ಸುದ್ದಿ9 ;ಮಂಗಳೂರು ನರೇಂದ್ರ ಮೋದಿ ಪ್ರಧಾನಿ ಅಭ್ಯಥರ್ಿಯಾದ ಮೇಲೆ ದೇಶದೆಲ್ಲೆಡೆ ಮೋದಿ ಅಲೆ ಎದ್ದಿದ್ದು ಜನರಲ್ಲಿ ಸಂಚಲನ ಮೂಡಿಸಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಬಿ.ಎಸ್.ಈಶ್ವರಪ್ಪ ತಿಳಿಸಿದರು.
ನಗರದ ಸಂಘನಿಕೇತನದಲ್ಲಿ ಭಾನುವಾರ ಭಾರತೀಯ ಜನತಾ ಪಕ್ಷದ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮೋದಿ ಶಕ್ತಿಯಿಂದ ರಾಜ್ಯದಲ್ಲಿ 20ಕ್ಕಿಂತಲೂ ಅಕ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಲಿದೆ. ಕಾಂಗ್ರೆಸ್ ಈ ಬಾರಿ ನಿನರ್ಾಮವಾಗಲಿದೆ. ಶಾಂತಿಯನ್ನು ಕದಡುವ, ಕೋಮುಪ್ರಚೋದನೆ ನಡೆಸುವ ಕೆಲಸವನ್ನು ಕಾಂಗ್ರೆಸ್ ನಡೆಸಬಾರದು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ 
ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ವರ್ಸಸ್ ಜನಾರ್ದನ ಪೂಜಾರಿ ಚುನಾವಣೆ ಅಲ್ಲ. ರಾಷ್ಟ್ರೀಯತೆ ವರ್ಸಸ್ ಅರಾಷ್ಟ್ರೀಯತೆ. ಕಳೆದ ಚುನಾವಣೆಯಲ್ಲಿ ಜಯಗಳಿಸಿದ್ದು ನಾನಲ್ಲ, ಬಿಜೆಪಿ. ಯಾವುದೇ ಅನುಭವ ಇಲ್ಲದೆ ಮೊದಲ ಬಾರಿಗೆ ಸಂಸದನಾದರೂ ರಾಜ್ಯದ ಉತ್ತಮ ಸಂಸದ ಎಂದು ಕೇಂದ್ರದ ವರದಿ ತಿಳಿಸುತ್ತದೆ. ಸಂಸದರ ನಿ ಬಳಕೆಯಲ್ಲಿಯೂ ಮುಂದಿದ್ದೇನೆ. ಕಾರ್ಯಕರ್ತರ, ಜನರ, ಶಾಸಕರ ವಿಶ್ವಾಸ ಪಡೆದುಕೊಂಡಿದ್ದೇನೆ. ಈ ಬಾರಿಯೂ ಅವಕಾಶ ಕೊಡಿ. ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತೇನೆ ಎಂದರು.
ಮಾಜಿ ಶಾಸಕ ಯೋಗೀಶ್ ಭಟ್, ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್, ನಗರಾಧ್ಯಕ್ಷ ರವಿಶಂಕರ್ ಮಿಜಾರ್, ಪ್ರಧಾನ ಕಾರ್ಯದಶರ್ಿಗಳಾದ ವೇದವ್ಯಾಸ ಕಾಮತ್, ಸುರ್ ಶೆಟ್ಟಿ ಕಣ್ಣೂರು, ರಾಜ್ಯ ಕಾರ್ಯಕಾರಿ ಸದಸ್ಯರಾದ ಶ್ರೀಕರ್ ಪ್ರಭು, ಪ್ರಭಾ ಮಾಲಿನಿ, ರಾಜ್ಯ ಪರಿಷತ್ ಸದಸ್ಯರಾದ ರಾಜ್ಗೋಪಾಲ್ ಶೆಟ್ಟಿ, ಉಮಾವತಿ, ಮನಪಾ ಪ್ರತಿಪಕ್ಷ ನಾಯಕ ಪ್ರೇಮಾನಂದ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ರೂಪಾ ಡಿ ಬಂಗೇರ, ಅಲ್ಪಸಂಖ್ಯಾತ ಘಟಕದ ಉಮಾಯಿ ಬಾನು, ಮುಮ್ತಾಜ್ ಕುದ್ರೋಳಿ ಉಪಸ್ಥಿತರಿದ್ದರು.
ಕಾಂಗ್ರೆಸ್ನ 50ಕ್ಕೂ ಅಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆ:
ಕಾಂಗ್ರೆಸ್ನ ಮಾಜಿ ಕಾಪರ್ೋರೇಟರ್ ಜೇಮ್ಸ್ ಡಿಸೋಜ, ಮುರಳೀಧರ ಬೋಳಾರ ಸೇರಿದಂತೆ 50ಕ್ಕೂ ಅಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಕೆ.ಎಸ್ ಈಶ್ವರಪ್ಪ ಹಾಗೂ ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್ ಇವರಿಗೆ ಪಕ್ಷದ ಶಾಲು ಹೊದಿಸಿ, ಸ್ವಾಗತಿಸಿ ಪಕ್ಷಕ್ಕೆ ಬರಮಾಡಿಕೊಂಡರು.





