ಉಳ್ಳಾಲ: ಉಚಿತ ಸಮೂಹಿಕ ವಿವಾಹದಂತಹ ಉತ್ತಮ ಕಾರ್ಯಕ್ರಮಗಳನ್ನು ಎಸ್ಎವೈಎಸ್ , ಎಸ್ಎಸ್ಎಫ್ನಂತಹ ಸಂಘಟನೆಗಳು ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹ. ದೇವರ ಕಾರ್ಯದಲ್ಲಿ ಹೋರಾಟ ಮಾಡಿದವರಿಗೆ ಜಯ ಖಂಡಿತಾ ಇದೆ. ಮದುವೆ ಕಾರ್ಯಗಳಿಗೆ ಪ್ರಯತ್ನಿಸುವವರು, ಸಹಾಯ ಮಾಡುವವರು ಇಸ್ಲಾಂ ಧರ್ಮದ ಬಗ್ಗೆ ಅರ್ಥ ಮಾಡಿಕೊಂಡವರು. ಪ್ರವಾದಿಯವರು ಸಾಗಿದ ಹಾದಿಯಲ್ಲಿ ಅವರು ಸಾಗುತ್ತಿರುವುದರಿಂದ ಅವರಿಗೆ ಪರಲೋಕದಲ್ಲಿ ಜಯ ಇದೆ ಎಂದು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು.


ಅವರು ಮುಡಿಪುವಿನಲ್ಲಿ ಭಾನುವಾರ ಎಸ್ ವೈಎಸ್ ಮುಡಿಪು ಸೆಂಟರ್ ವತಿಯಿಂದ ನಡೆದ 11 ಜೋಡಿಗಳ ಉಚಿತ ಸಾಮೂಹಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈಗ ವಿವಾಹ ಕಾರ್ಯದಲ್ಲಿ ನಡೆಯುವುದು ಕೇವಲ ಫೋಟೋ ತೆಗೆಯುವ ಕಾರ್ಯ ಮಾತ್ರ. ನಾವದನ್ನು ಬದಿಗಿಟ್ಟು ವದೂವರರಿಗೆ ಪ್ರಾಥಿಸುವ ಕಾರ್ಯ ಮಾಡಬೇಖು. ಎಸ್ವೈಎಸ್ ಹಮ್ಮಿಕೊಳ್ಳುವ ಇಸ್ಲಾಂನ ಚೌಕಟ್ಟು ಮೀರದ ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಸೇರಿ ಸಹಕಾರ ಮಾಡಬೇಕು. ಅದಕ್ಕೆ ತಕ್ಕುದಾದ ಪ್ರತಿಫಲ ಅಲ್ಲಾಹನು ನೀಡುತ್ತಾನೆ ಎಂದರು.
ಜಿ.ಪಂ. ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ. ಎಸ್ವೈಎಸ್ ಮುಡಿಪು ಸೆಂಟರ್ ಹಮ್ಮಿಕೊಂಡಿರುವ 11 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಕ ಕಾರ್ಯಕ್ರಮದ ವಿಚಾರ ತಿಳಿದು ಬಹಳ ಸಂತೋಷವಾಯಿತು. ಸಮಾಜ ಸೇವೆಯಲ್ಲಿ ಮಹತ್ತರವಾದ ಸೇವೆ ಇದಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ದೇವರು ಮೆಚ್ಚುವ ಕಾರ್ಯಗಳಲ್ಲಿ ಇದೂ ಕೂಡಾ ಒಂದು. ಇಂತಹ ಕಾರ್ಯಕ್ರಮಗಳಿಗೆ ನನ್ನ ಸೇವೆ ಖಂಡಿತಾ ಇದೆ ಎಂದರು.

