ಬಂಟ್ವಾಳ: ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಕೆದ್ದಳಿಕೆ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಅವರಿಗೆ ಸಾರ್ವಜನಿಕ ಅಭಿನಂದನೆ ಹಾಗೂ ಅಭಿನಂದನಾ ಗ್ರಂಥ ಸಮರ್ಪಿಸುವ ಉದ್ದೇಶದಿಂದ ಬಿ.ಸಿ.ರೋಡಿನಲ್ಲಿ ಕೆ.ರಮೇಶ ನಾಯಕ್ ರಾಯಿ ಅಭಿನಂದನಾ ಸಮಿತಿ ಭಾನುವಾರ ರಚನೆಗೊಂಡಿದೆ.
ಸಮಿತಿಯ ಗೌರವಾಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಟಿ.ಶೇಷಪ್ಪ ಮೂಲ್ಯ, ಅಧ್ಯಕ್ಷರಾಗಿ ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಪ್ರಧಾನ ಕಾರ್ಯದರ್ಶಿಯಾಗಿ ಆಲದಪದವು ಅಕ್ಷರ ಪ್ರತಿಷ್ಠಾನದ ಸಂಚಾಲಕ ಗೋಪಾಲ ಅಂಚನ್ ಹಾಗೂ ಕೋಶಾಧಿಕಾರಿಯಾಗಿ ಕೆದ್ದಳಿಕೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ದಿವಾಕರ ದಾಸ್ ಆಯ್ಕೆಯಾಗಿದ್ದಾರೆ.
ಫೆ.21ರಂದು ಅಪರಾಹ್ನ 2ಗಂಟೆಗೆ ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಕೆ.ರಮೇಶ ನಾಯಕ್ ರಾಯಿ ಅವರ ಜಿಲ್ಲಾ ಮಟ್ಟದ ಸಾರ್ವಜನಿಕ ಅಭಿನಂದನೆ ಹಾಗೂ ನಾಯಕರ ಬದುಕು ಸಾಧನೆಗಳನ್ನೊಳಗೊಂಡ ಅಭಿನಂದನಾ ಗ್ರಂಥದ ಸಮರ್ಪಣೆ ಸಮಾರಂಭವನ್ನು ನಡೆಸಲು ಸಮಿತಿ ತೀರ್ಮಾನಿಸಿದೆ.
ಇದೇ ಸಂದರ್ಭ ಸಮಿತಿ ಕಾರ್ಯದರ್ಶಿಗಳಾಗಿ ಗಣೇಶ ನಾಯಕ್, ಪದ್ಮನಾಭ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಶಿವಪ್ರಸಾದ್ ಶೆಟ್ಟಿ, ಬಾಬು ಮಾಸ್ತರ್, ನಾರಾಯಣ ಪೆರ್ನೆ , ಎಚ್ಕೆ.ನಯನಾಡು, ನಾದ ಮಣಿನಾಲ್ಕೂರು, ಪ್ರಭಾಕರ ಪ್ರಭು, ಚಂದ್ರಶೇಖರ ಪ್ರಭು, ಸಂಘಟನಾ ಕಾರ್ಯದರ್ಶಿಗಳಾಗಿ ಸುರೇಶ್ ಶೆಟ್ಟಿ, ವಿಠಲ ಬಿ, ಅಖಿಲ್ ಶೆಟ್ಟಿ, ಜಯರಾಮ, ನವೀನ್ ಪಿ.ಎಸ್, ಇಮ್ತಿಯಾಜ್,ಚಂದಪ್ಪ ಪೂಜಾರಿ ಹಾಗೂ ಗೌರವ ಸಲಹೆಗಾರರಾಗಿ ಶೇಷಶಯನ ಕಾರಿಂಜ, ಶಿವಶಂಕರ ಭಟ್ ಮಂಗಳೂರು, ಶ್ರೀಧರ ಉಳ್ಳಾಲ್, ಮಹಾಭಲೇಶ್ವರ ಹೆಬ್ಬಾರ್, ರೋಹಿನಾಥ್, ರಾಮಚಂದ್ರ ರಾವ್, ಮೋನಪ್ಪ ಕೆ., ಜೋಯಲ್ ಲೋಬೋ, ಅಬ್ದುಲ್ ರಜಾಕ್ ಅನಂತಾಡಿ, ಶಾರದಾ ಎಸ್.ರಾವ್, ವಾಸುದೇವ ಗೌಡ ಕಡಬ, ಮೋಹನ ಆಚಾರ್ಯ, ಕೃಷ್ಣಪ್ರಕಾಶ್, ಪ್ರಬಾಕರ ಹೆಗ್ಡೆ ಬೆಳ್ತಂಗಡಿ, ತೀರ್ಥರಾಮ ಸುಳ್ಯ, ನಾಗೇಶ ಮೂಡಬಿದ್ರೆ ಆಯ್ಕೆಯಾಗಿದ್ದಾರೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

