ಸುದ್ದಿ9 ಮಂಗಳೂರು; ಪುರಭವನದಲ್ಲಿ ಮೇಳೈಸಿದ `ನಮ್ಮ ನಡಿಗೆ ಖಾದಿಯೆಡೆಗೆ’ ಫ್ಯಾಶನ್ ಶೋ ಗುರುವಾರ ಸಂಪೂರ್ಣ ಖಾದಿಮಯವಾಗಿತ್ತು. ನಗರದ ಗಣ್ಯ ವ್ತಕ್ತಿಗಳು, ಸೆಲೆಬ್ರಿಟಿ ಸ್ಟಾರ್ಗಳು ಖಾದಿ ತೊಟ್ಟು ನಗು ಬೀರುತ್ತಿದ್ದರು. ಚರಕಕ್ಕೆ ಮತ್ತೆ ಹೊರ ರೂಪ ಬಂದಂತಾಗಿತ್ತು. ಬಣ್ಣದ ಬೆಳಕಿನಡಿ ಖಾದಿ ಮಿಂಚುತ್ತಿತ್ತು. ಫ್ಯಾಶನ್ ಲೋಕದೊಳಗೆ ಖಾದಿ ಖದರ್ ಉತ್ತಮವಾಗಿ ಮೂಡಿಬಂತು. ನಗರದ ಹಲವಾರು ಗಣ್ಯರು, ಸೆಲೆಬ್ರಿಟಿ ಸ್ಟಾರ್ಗಳು ಖಾದಿ ಹಾಕಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದಾಗ ಕೈ ಚಪ್ಪಾಳೆ ಸದ್ದು ಜೋರಾಗಿತ್ತು. ಯುವಕರನ್ನು ನಾಚಿಸುವಂತೆ ವೃದ್ಧ ದಂಪತಿಗಳು ರ್ಯಾಂಪ್ ವಾಕ್ ಮಾಡಿ ಗಮನಸೆಳೆದರು. ಒಟ್ಟು 125 ಜನ ಖಾದಿ ಖದರ್ನಲ್ಲಿ ವಾಕ್ ಮಾಡಿದರು. ಮಿಫ್ಟ್ ಕಾಲೇಜು, ವಸ್ತ್ರ ಕುಟೀರ ಹಾಗೂ ಖಾದಿ.ಕಾಮ್ ಆಯೋಜಿಸಿದ ಕಾರ್ಯಕ್ರಮ ಓಲ್ಡ್ ಈಸ್ ಗೋಲ್ಟ್ ಎಂದು ಮತ್ತೆ ನಿರೂಪಿಸಿತು.
ನಟ ಅಜರ್ುನ್ ಕಾಪಿಕಾಡ್, ನಿರೆಲ್ ಖ್ಯಾತಿಯ ಅನುಪ್ ಸಾಗರ್, ರಿಕ್ಷಾ ಡ್ರೈವರ್ ಕಾತರ್ಿಕ್ ಬಂಜನ್, ಚಿತ್ರ ಮಿತ್ರ, ಮೈತ್ರಿ ಮಲ್ಲಿ ಮೊದಲಾದವರು ರ್ಯಾಂಪ್ ಮೇಲೆ ಖಾದಿ ತೊಟ್ಟು ವಾಕ್ ಮಾಡಿದಾಗ ಪ್ರೇಕ್ಷಕರ ಕೈ ಚಪ್ಪಾಳೆ, ಶಿಳ್ಳೆ ಜೋರಾಗಿತ್ತು.
ಮಿಫ್ಟ್ ಕಾಲೇಜಿನ ಪ್ರಗತಿ ಶ್ರೀರಾವ್ ಡಿಸೈನ್ ಮಾಡಿದ ಯಕ್ಷಗಾನ, ಕಥಕ್ ಚಿತ್ರಗಳನ್ನು ಒಳಗೊಂಡ ಸಾರಿ ಮತ್ತು ಶೆವರ್ಾನಿಯ ಉಡುಪಿನೊಂದಿಗೆ ಮಿಫ್ಟ್ ಕಾಲೇಜಿನ ವಿದ್ಯಾಥರ್ಿಗಳು ಫ್ಯಾಶನ್ ನಡಿಗೆ ಮೂಲಕ ಗಮನಸೆಳೆದರು. ಮಂಗಳೂರು ಆಕಾಶವಾಣಿ ನಿಲಯ ನಿದರ್ೇಶಕ ವಸಂತ ಕುಮಾರ್ ಪೆರ್ಲ ಕುತರ್ಾ ಧರಿಸಿ ಪತ್ನಿಯ ಜತೆ ಫ್ಯಾಶನ್ ಮ್ಯೂಸಿಕ್ಗೆ ಹೆಜ್ಜೆಯಾದರು. ಲಯನ್ಸ್ ಜಿಲ್ಲಾ ಗರ್ವನರ್ ಕೆ.ಸಿ.ಪ್ರಭು ಕುತರ್ಾದ ಮೇಲೆ ಖಾದಿ ಜಾಕೆಟ್ ಧರಿಸಿ ಪತ್ನಿ ಜತೆ ಹೆಜ್ಜೆ ಹಾಕಿ ಅಬಿಮಾನಿಗಳ ಕಡೆ ಕೈ ಬೀಸಿದಾಗ ಚಪ್ಪಾಳೆಯ ಅಬ್ಬರ ಕೇಳಿಬಂತು.

ಪುರುಷೋತ್ತಮ ರೈ ದಂಪತಿ, ಎಂ.ಪಿ.ನಂಬಿಯಾರ್ ದಂಪತಿ, ದೀಪಕ್ ದಂಪತಿ ಮೊದಲಾದವರು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ಖಾದಿ ಫ್ಯಾಶನ್ ಮಂಗಳೂರಿನ ಕೆಲವೊಂದು ಖಾದಿ ಅಂಗಡಿಗಳಿಗೆ ಭರಪೂರ ವ್ಯಾಪಾರವನ್ನು ನೀಡಿದೆ. ಫ್ಯಾಶನ್ ರ್ಯಾಂಪ್ ವಾಕ್ನ ಹೆಸರಿನಲ್ಲಿ ಹಲವಾರು ಜನ ಖಾದಿ ಅಂಗಡಿಗಳಿಂದ ಖಾದಿ ಬಟ್ಟೆ ಖರೀದಿಸಿದ್ದರಿಂದ ಮಂಗಳೂರಿನಲ್ಲಿ 1 ಲಕ್ಷದಷ್ಟು ವ್ಯಾಪಾರವಾಗಿದೆ ಎಂದು ಪ್ರಾಯೋಜಕರಲ್ಲಿ ಒಬ್ಬರಾದ ಉಮೇಶ್ ರಾಜ್ ತಿಳಿಸಿದ್ದಾರೆ.
ಮೈಮ್ ಶೋ ಮೂಲಕ ವಿದ್ಯಾಥರ್ಿಗಳು ಕನರ್ಾಟಕ ದರ್ಶನವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟರು. ಕನರ್ಾಟಕದ ನಾಡು, ನುಡಿ, ಸಂಸ್ಕೃತಿ ಮೂಕಾಭಿನಯದಲ್ಲಿ ಜೀವ ತುಂಬಿದರು. ದಸರಾ ಅಂಬಾರಿ, ಒನಕೆ ಓಬವ್ವ, ಮಸ್ತಕಾಭಿಷೇಕ, ಕರಾವಳಿಯ ಹುಲಿ ವೇಷ, ಯಕ್ಷಗಾನ ಕುಣಿತ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪೂಜಾ ಪದ್ಧತಿ, ಧರ್ಮ ಭಾವೈಕ್ಯತೆ ಮುಂತಾದ ವಿಭಿನನ್ನತೆನ್ನು ಒಳಗೊಂಡ ಮೈಮ್ ಶೋ ಪ್ರೇಕ್ಷಕರ ಗಮನ ಸೆಳೆಯಿತು.
ಮಿಫ್ಟ್ ನಿದರ್ೇಶಕ ಎಂ.ಜಿ.ಹೆಗಡೆ, ಬರಹಗಾರ ವಿ.ಟಿ.ರಾಜಶೇಖರನ್, ಚಲನಚಿತ್ರ ನಿದರ್ೇಶಕ ಸಂದೀಪ್ ಮಲಾನಿ, ಚಂದ್ರಹಾಸ್, ಉದ್ಯಮಿ ಅಶೋಕ್ ಕುಮಾರ್, ಆಕಾಶವಾಣಿ ನಿಲಯ ನಿದರ್ೇಶಕ ವಸಂತ್ ಕುಮಾರ್ ಪೆರ್ಲ, ಡಾ.ಶಿವಶರಣ್ ಶೆಟ್ಟಿ, ಸುಹಾಸ್ ರಾವ್, ಪ್ರಿನ್ಸಿಪಾಲ್ ಚಂದ್ರಲೇಖ ಗೌಡ, ಪ್ರಾಯೋಜಕರಾದ ಉಮೇಶ್ ರಾಜ್, ಸುಹಾಸ್ ರಾವ್, ವಿದ್ಯಾಥರ್ಿ ಮುಖಂಡ ಕಾತರ್ಿಕ್ ಭಟ್ ಮೊದಲಾದವರು ಉದ್ಘಾಟನಾ ಸಭಾರಂಭದಲ್ಲಿ ಉಪಸ್ಥಿತರಿದ್ದರು.



