ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಯುವ ಕಾಂಗ್ರೆಸ್ ಸಮಿತಿ ಮತ್ತು ಕಳ್ಳಿಗೆ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಕಳ್ಳಿಗೆ ಮೈದಾನದಲ್ಲಿ ಭಾನುವಾರ ಸಮಾರೋಪಗೊಂಡ ರಾಜ್ಯಮಟ್ಟದ ಎರಡು ದಿನಗಳ ಕಬಡ್ಡಿ ಪಂದ್ಯಾಟದ ಪುರುಷರ (65ಕೆ.ಜಿ) ವಿಭಾಗದಲ್ಲಿ ಬಂಟ್ವಾಳ ಕನಪಾದೆ ಸೆವೆನ್ ಸ್ಟಾರ್ ತಂಡ ಮತ್ತು ಮಹಿಳೆಯರ (ಮುಕ್ತ) ವಿಭಾಗದಲ್ಲಿ ಮೂಡುಬಿದ್ರೆ ಆಳ್ವಾಸ್ ತಂಡವು ಪ್ರಥಮ ಬಹುಮಾನ ಮತ್ತು ‘ಕಳ್ಳಿಗೆ ಟ್ರೋಫಿ’ ಗೆದ್ದುಕೊಂಡಿದೆ.
ಮೂಡುಬಿದ್ರೆ ಆಳ್ವಾಸ್ ಕಾಲೇಜು ತಂಡವು ಪ್ರಥಮ ಬಹುಮಾನ ಮತ್ತು ಟ್ರೋಫಿ ಗೆದ್ದುಕೊಂಡಿತು.

ಬಂಟ್ವಾಳ ಕನಪಾದೆ ಸೆವೆನ್ ಸ್ಟಾರ್ ತಂಡವು ಪ್ರಥಮ ಬಹುಮಾನ ಮತ್ತು ಟ್ರೋಫಿ ಗೆದ್ದುಕೊಂಡಿತು.

ಪುರುಷರ ವಿಭಾಗದಲ್ಲಿ ಒಟ್ಟು 80 ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ ಒಟ್ಟು 15 ತಂಡಗಳು ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸಿ ಭಾಗವಹಿಸಿದ್ದರು.
ಪುರುಷರ ವಿಭಾಗದಲ್ಲಿ ಬೆಂಗಳೂರು ಕೇಶವಾಸ್ ಸ್ಪೋಟ್ರ್ಸ ಕ್ಲಬ್ ದ್ವಿತೀಯ, ಇರಾ ಬಾರತ್ ಸ್ಪೋಟ್ರ್ಸ ಕ್ಲಬ್ ತೃತೀಯ, ತೊಕ್ಕೊಟ್ಟು ನಿತ್ಯಾನಂದ ಯುವಕ ಮಂಡಲ ಚತುರ್ಥ ಬಹುಮಾನ ಮತ್ತು ಟ್ರೋಫಿ ಗೆದ್ದುಕೊಂಡಿದೆ.
ಮಹಿಳಾ ವಿಭಾಗದಲ್ಲಿ ಬೆಂಗಳೂರು ಶ್ರೀಮಾತಾ ಸ್ಪೋಟ್ರ್ಸ ಕ್ಲಬ್ ದ್ವಿತೀಯ, ಉಜಿರೆ ಎಸ್ಡಿಎಂ ಕಾಲೇಜು ತಂಡ ತೃತೀಯ, ಮೂಡುಬಿದ್ರೆ ಆಳ್ವಾಸ್ ಕಕ್ಲಬ್ ತಂಡವು ಚತುರ್ಥ ಬಹುಮಾನ ಮತ್ತು ಟ್ರೋಫಿ ಗೆದ್ದುಕೊಂಡಿದೆ.
ಎರಡು ದಿನಗಳಲ್ಲಿ ನಡೆದ ಹೊನಲು ಬೆಳಕಿನ ಆಕರ್ಷಕ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಮಾತ್ರವಲ್ಲದೆ ಬಾಗಲಕೋಟೆ, ಗದಗ, ಚಿತ್ರದುರ್ಗ, ಬೆಳಗಾವಿ, ಉತ್ತರ ಕನ್ನಡ, ಕೊಡಗು, ರಾಮನಗರ, ಬೆಂಗಳೂರು, ಚಿಕ್ಕಮಂಗಳೂರು ಮತ್ತಿತರ ಜಿಲ್ಲೆಯಿಂದ ಒಟ್ಟು 95 ತಂಡಗಳು ಉತ್ಸಾಹದಿಂದ ಪಾಲ್ಗೊಂಡಿದ್ದವು.
ಸಮಿತಿ ಗೌರವಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಪ್ರಮುಖರಾದ ಬೇಬಿ ಕುಂದರ್, ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಅಬ್ಬಾಸ್ ಆಲಿ, ಕೆ.ಮಾಯಿಲಪ್ಪ ಸಾಲ್ಯಾನ್, ಪಿಯೂಸ್ ಎಲ್.ರಾಡ್ರಿಗಸ್, ಬಿ.ಪದ್ಮಶೇಖರ ಜೈನ್, ಪ್ರಶಾಂತ ಕುಲಾಲ್, ಪ್ರಕಾಶ ಶೆಟ್ಟಿ ತುಂಬೆ ಮತ್ತಿತರರು ಇದ್ದರು.
