ಮಂಗಳೂರು : ಹಿಂದೂ ಸಮಾಜೋತ್ಸವದ ಸಭೆ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕರಿಬ್ಬರ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಗುರುವಾರ ತಡರಾತ್ರಿ ಕಾವೂರು ಮಿಲ್ಲತ್ ನಗರ ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಕಾವೂರು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಕಾವೂರು ನಿವಾಸಿಗಳಾದ ರಘು ಮತ್ತು ಪ್ರವೀಣ್ ಎಂಬವರೇ ಗಾಯ ಗೊಂಡವರಾಗಿದ್ದಾರೆ. ಇವರಿಬ್ಬರು ಹಿಂದೂ ಸಂಘಟನೆಯ ಸಭೆಯೊಂ ದನ್ನು ಮುಗಿಸಿ ರಾಜೇಶ್ ಎಂಬಾತನ ಬೈಕಿನಲ್ಲಿ ಬರುತ್ತಿದ್ದ ವೇಳೆ ಮಿಲ್ಲತ್ ನಗರದ ಬಳಿ ಇವರನ್ನು ತಡೆದು ನಿಲ್ಲಿಸಿದ ಖಲಂದರ್, ಜಾಕಿರ್ ಮತ್ತು ಆಸಿಫ್ ಎಂಬವರು ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ನಿಲ್ಲಿಸಿ ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ಕಾವೂರು ಠಾಣೆಗೆ ರಾಜೇಶ್ ಎಂಬವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸಂಘಟನೆ ಯಲ್ಲಿ ಸಕ್ರಿಯವಾಗಿದ್ದ ಕಾರಣದಿಂದ ಈ ಹಲ್ಲೆ ನಡೆದಿದೆ ಎಂದು ಶಂಕಿಸ ಲಾಗಿದೆ. ಕಾವೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

