ಬೆಳ್ತಂಗಡಿ: ಕರಾಯ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿದ ಉಜಿರೆ ಕಾಲೇಜಿನ ಅಮಾಯಕ ವಿದ್ಯಾರ್ಥಿ, ಎಬಿವಿಪಿ ಮುಖಂಡ ನಿಧೀಶ್ ಶೆಟ್ಟಿ ಎಂಬವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ನಿಧೀಶ್ ಶೆಟ್ಟಿ ಅಮಾಯಕ, ಆತನನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಎಬಿವಿಪಿ ವತಿಯಿಂದ ಕಳೆದ ಹಲವಾರು ದಿನಗಳಿಂದ ಪ್ರತಿಭಟನೆ ನಡೆಯುತ್ತಿತು.
ಪುತ್ತೂರಿನಲ್ಲಿ ನಡೆದ ಹಿಂದೂ ಹೃದಯ ಸಂಗಮ ಕಾರ್ಯಕ್ರಮದ ಬಳಿಕ ಉಪ್ಪಿನಂಗಡಿಯ ಸಮೀಪದ ಕರಾಯ ಮಸೀದಿಗೆ ಕಲ್ಲೆಸೆದ ಘಟನೆ ನಡೆದಿತ್ತು. ಮೊದಲು ಹಿಂದೂ ಸಂಘಟನೆಯ ವಾಹನದ ಮೇಲೆ ಕಲ್ಲೆಸೆದ ನಂತರ ಈ ಘಟನೆ ನಡೆದು ಕೋಮುದಳ್ಳುರಿಗೆ ಕಾರಣವಾಗಿ ಹಲವಾರು ಮಂದಿ ಗಾಯಗೊಂಡಿದ್ದರು.
ಸಿಸಿಟಿವಿ ಫುಟೇಜ್‍ನಲ್ಲಿ ನಿಧೀಶ್ ಶೆಟ್ಟಿ ಚಹರೆ ಮೂಡಿದೆ ಎಂಬ ಕಾರಣವನ್ನು ಮುಂದಿಟ್ಟು ಈತನ ಬಂಧನ ನಡೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಇದೆಲ್ಲಾ ಸುಳ್ಳು, ಪೊಲೀಸರು ಒತ್ತಡಕ್ಕೆ ಮಣಿದು ಸುಳ್ಳು ಕಥೆ ಹೆಣೆದು ಬೇಕೆಂದೇ ನಿಧೀಶ್ ಸಹಿತ ಹಲವು ಅಮಾಯಕರನ್ನು ಬಂಧಿಸಲಾಗಿದೆ ಎಂಬುದು ಎಬಿವಿಪಿ ಕಾರ್ಯಕರ್ತರ ಆರೋಪವಾಗಿತ್ತು.

