ಬೆಂಗಳೂರು: ವಿಶ್ವಹಿಂದೂ ಪರಿಷತ್‍ನ ಅಂತಾರಾಷ್ಟ್ರೀಯ ಮುಖಂಡ ಪ್ರವೀಣ ಭಾಯ್ ತೊಗಡಿಯಾ ಬೆಂಗಳೂರು ಪ್ರವೇಶ ನಿರ್ಬಂಧವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ನಿರ್ಬಂಧ ತಡೆಗೆ ಹೈಕೋರ್ಟ್ ನಿರಾಕರಿಸಿದೆ.

togadia
ತೊಗಡಿಯಾ ಬೆಂಗಳೂರಿಗೆ ಪ್ರವೇಶಿಸಿ ಹಿಂದೂ ಸಮಾಜೋತ್ಸವದಲ್ಲಿ ಭಾಷಣ ಕೈಗೊಂಡರೆ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ ಆದ್ದರಿಂದ ಅವರು ಬೆಂಗಳೂರು ಪ್ರವೇಶಿಸದಂತೆ ಬೆಂಗಳೂರಿನ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು.
ಆದರೆ ಈ ಆದೇಶವನ್ನು ಪ್ರಶ್ನಿಸಿ ತೊಗಡಿಯಾ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರ ಏಕ ಸದಸ್ಯ ಪೀಠ ಆಯುಕ್ತರ ಆದೇಶಕ್ಕೆ ತಡೆ ನೀಡಲು ನಕಾರ ಸೂಚಿಸಿದೆ.ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬಹುದು, ಅದಕ್ಕೆ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ
ಆದ್ದರಿಂದ ಭಾನುವಾರ ನಡೆಯುವ ವಿರಾಟ್ ಹಿಂದೂ ಸಮಾಜ್ಯೋತ್ಸವಕ್ಕೆ ಪ್ರವೀಣ್ ಭಾಯ್ ತೊಗಡಿಯಾ ಭಾಗವಹಿಸುವುದಿಲ್ಲ.

By suddi9

Leave a Reply

Your email address will not be published. Required fields are marked *