ಪುತ್ತೂರು: ಯುವತಿಯ ಶಾಲು ಎಳೆಯಲು ಹೋಗಿ ನಾಗರಿಕರಿಂದ ಒದೆ ತಿಂದುಕೊಂಡು ಪೊಲೀಸರ ಅತಿಥಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ ಯುವಕನೋರ್ವ ಇದೀಗ ಜಾಮೀನಿನ ಮೇಲೆ ಹೊರ ಬಂದು ಆಸ್ಪತ್ರೆಗೆ ದಾಖಲಾಗಿ ವಿನಾ ಕಾರಣ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆದಂಬಾಡಿ ಗ್ರಾಮದ ಕಟ್ಟತ್ತಾರು ಸಮೀಪದ ನಿಡ್ಯಾಣ ನಿವಾಸಿ ನಿವಾಸಿ ಅಬ್ದುಲ್ಲರವರ ಪುತ್ರ ಮೊಹಮ್ಮದ್ ರಫೀಕ್(30) ಆಸ್ಪತ್ರೆಯಲ್ಲಿ ದಾಖಲಾಗಿದವ.

shal

`ಕೂಲಿ ಕಾರ್ಮಿಕನಾಗಿರುವ ನಾನು ಜ.29ರಂದು ರಾತ್ರಿ ನನ್ನ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಪುಣ್ಚಪ್ಪಾಡಿಯ ತಿರುವಿನಲ್ಲಿ ಲಿಂಗಪ್ಪರವರ ರಿಕ್ಷದಲ್ಲಿ ಬಂದ ಸುಮಾರು ಏಳು ಜನರು ರಿಕ್ಷವನ್ನು ನನ್ನ ಬೈಕಿಗೆ ಅಡ್ಡವಿಟ್ಟು ನಿನ್ನ ಹೆಸರೇನು ಎಂದು ಕೇಳಿದರು. ಈ ವೇಳೆ ನನ್ನ ಹೆಸರನ್ನು ಹೇಳಿದ್ದು ಇಷ್ಟೋತ್ತಾಗುತ್ತಿದ್ದಂತೆ ಕಾರು ಬೈಕ್ ಹಾಗು ಜೀಪಿನಲ್ಲಿ ಸತೀಶ, ದಿಲೀಪ್, ಗಿರಿಶಂಕರ್, ಮೋಹನ ದೇವಾಡಿಗ ಸಹಿತ ಸುಮಾರು ಐವತ್ತು ಜನರು ಬಂದು ಸೇರಿದರು. ಆ ಬಳಿಕ ಅವರೆಲ್ಲರೂ ಸೇರಿ ನನ್ನ ಮೇಲೆ ಹಲ್ಲೆ ನಡೆಸಿ ನನ್ನ ಬೈಕನ್ನು ಪುಡಿಗೈದಿದ್ದಾರೆ. ಆ ಬಳಿಕ ಹತ್ತಿರದ ಮನೆಗೆ ಕೊಂಡು ಹೋಗಿ ಅಲ್ಲಿ ಹಲ್ಲೆ ನಡೆಸಿ ರಾತ್ರಿ ಸುಮಾರು ಒಂದು ಘಂಟೆ ವೇಳೇಗೆ ಕಡಬ ಪೆÇಲೀಸರಿಗೆ ನನ್ನನ್ನು ಹಸ್ತಾಂತರಿಸಿದ್ದಾರೆ. ಆ ಬಳಿಕ ಪೆÇಲೀಸರು ನನ್ನ ಮೇಲೆ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆದರೆ ಪೆÇಲೀಸರು ನನ್ನ ಮೇಲೆ ಯಾವ ಕಾರಣಕ್ಕಾಗಿ ಕೇಸು ದಾಖಲಿಸಿದ್ದಾರೆಂದು ತಿಳಿದಿಲ್ಲ. ಫೆ.2ರಂದು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದು, ಹಲ್ಲೆ ನಡೆಸಿದ ನೋವು ವಿಪರೀತವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಂದು ದಾಖಲಾಗಿದ್ದೇನೆ ಎಂದು ಮೊಹಮ್ಮದ್ ರಫೀಕ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *