ಬೆಂಗಳೂರು :ಸಂಪನ್ಮೂಲ ಕ್ರೋಢೀಕರಣಕ್ಕಾಗಿ ರಾಜ್ಯದಲ್ಲಿ ಮತ್ತೆ ಲಾಟರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದು, ಈ ಬಗ್ಗೆ ಅವರು ಮಾರ್ಚ್  ತಿಂಗಳ ಮೊದಲ ಭಾಗದಲ್ಲಿ ಮುಂಗಡ ಪತ್ರ ಮಂಡಿಸಲಿದ್ದು, ಈ ಸಂದರ್ಭದಲ್ಲಿಯೇ ರಾಜ್ಯದಲ್ಲಿ ಲಾಟರಿ ಮರು ಸ್ಥಾಪನೆಗೆ ಸಂಬಂಧಿಸಿದಂತೆ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.
images
ಸಿದ್ದರಾಮಯ್ಯ ಅವರ ಆಪ್ತ ಹಾಗೂ ಅವರ ಒಡನಾಡಿ ಯೋಜನಾ ಮಂಡಳಿಯ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಇಂದಿಲ್ಲಿ ಕರೆದಿದ್ದ ತುತರ್ು ಪತ್ರಿಕಾ ಗೋಷ್ಠಿಯಲ್ಲಿ ಕನರ್ಾಟಕದಲ್ಲಿ ಮತ್ತೆ ಲಾಟರಿ ತರುವ ಮುನ್ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಯವರು ಬಡ ಮತ್ತು ಮಧ್ಯಮ ವರ್ಗದ ಮಂದಿ ದೀರ್ಘ ಕಾಯಿಲೆಗಳಿಗೆ ಒಳಪಟ್ಟರೆ ಅಂತಹವರಿಗೆ ಉಚಿತ ಚಿಕಿತ್ಸೆ ನೀಡುವುದು ಅಲ್ಲದೆ, ತಮಿಳುನಾಡು ಮಾದರಿಯಲ್ಲಿ ಅಣ್ಣಾ ನೀರು ಮತ್ತು ಇಡ್ಲಿ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಿದ್ದಾರೆ.
ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನಾನು ಇಂತಹ ಯೋಜನೆಗಳನ್ನು ಜಾರಿಗೆ ತನ್ನಿ ಎಂದು ಸಕರ್ಾರಕ್ಕೆ ಶಿಫಾರಸ್ಸು ಮಾಡುತ್ತೇನೆ.
ಒಟ್ಟಾರೆ ಈ ಎಲ್ಲಾ ಯೋಜನೆಗಳ ಅನುಷ್ಠಾನಗೊಳಿಸಲು ರಾಜ್ಯ ಬೊಕ್ಕಸದ ಮೇಲೆ ವಾಷರ್ಿಕ 500-600 ಕೋಟಿ ರೂ. ಹೊರೆ ಬೀಳಲಿದೆ.
ಈ ಹಣ ಕ್ರೋಢೀಕರಣಕ್ಕೆ ಕೇರಳದಲ್ಲಿರುವಂತೆ 10 ರೂ. ಮುಖಬೆಲೆಯ ಹೊಸ ಲಾಟರಿ ಯೋಜನೆಯನ್ನು ಅನುಷ್ಠಾನ ಮಾಡಲು ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
ವಾರ, ತಿಂಗಳಿಗೆ ಒಂದಾವತರ್ಿ ಲಾಟರಿ ಮಾಡಿದರೆ ಎಷ್ಟು ಸಂಪನ್ಮೂಲ ಕ್ರೋಢೀಕರಣವಾಗಲಿದೆ, ಲಾಟರಿ ಮಾರಾಟಗಾರರಿಗೆ ಎಷ್ಟು ಮೊತ್ತ ಕಮೀಶನ್ ನೀಡಬೇಕು, ಅನುಷ್ಠಾನ ಮಾಡುವ ಬಗೆಹೇಗೆ ಎಂಬೆಲ್ಲಾ ಸಮಗ್ರ ವರದಿ ನೀಡುವಂತೆ ಮೈಸೂರ್ ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ಗೆ ಸೂಚಿಸಲಾಗಿದೆ.
ವರದಿ ಬಂದ ಬಳಿಕ ಸರಕಾರಕ್ಕೆ ಸಮಗ್ರ ಪ್ರಸ್ತಾವನೆ ಸಲ್ಲಿಸಲಾಗುವುದು. ಮಾರಕ ಕಾಯಿಲೆಗೆ ಚಿಕಿತ್ಸೆ ನೀಡಲು ಹಣ ಸಂಗ್ರಹಕ್ಕೆ 10 ರೂ. ಗಳನ್ನು ಲಾಟರಿ ಮೂಲಕ ನೀಡುವುದು ಯಾರಿಗೂ ಕಷ್ಟವಾಗಲಾರದು. ಲಾಟರಿ ಮೂಲಕ ಸಂಗ್ರಹವಾಗುವ ಹಣವನ್ನು ಅಣ್ಣಾ ಕಾರುಣ್ಯ ಆರೋಗ್ಯ ಯೋಜನೆಗೆ ಮಾತ್ರ ಬಳಸಲಾಗುವುದು.
ಯಾವುದೇ ಕಾರಣಕ್ಕೂ ಒಂದಂಕಿ ಲಾಟರಿಗೆ ಇದು ಅವಕಾಶ ನೀಡುವುದಿಲ್ಲ ಎಂದ ಇಬ್ರಾಹಿಂ, ಲಾಟರಿ ನಿಷೇಧವಿದ್ದರೂ ಜೂಜು, ಮಟ್ಕಾ ನಿಂತಿಲ್ಲವಲ್ಲ ಎಂದು ಹೇಳಿದರು

By suddi9

Leave a Reply

Your email address will not be published. Required fields are marked *