ಕೋಟ: ಸಾಲಿಗ್ರಾಮ ಸಮೀಪದ ಕಾರ್ಕಡ ನಿವಾಸಿ ವಿಜಯ್ ಕಾರಂತ (31) ಸೋಮವಾರ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂದು ಇದೀಗ ಸುಳಿವು ದೊರೆತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನೆರಯ ಸ್ನೇಹಿತನಿಂದಲೇ ಕೊಲೆ ನಡೆದಿರುವ ಬಗ್ಗೆ ಪೋಲಿಸ್ ಮೂಲಗಳು ತಿಳಿಸಿದೆ.

ಅವಿವಾಹಿತನಾದ ವಿಜಯ ಕಾರಂತ ಸಾಲಿಗ್ರಾಮ ಸಮೀಪದ ಕಾರ್ಕಡ ಕಡಿದ ಹೆದ್ದಾರಿ ಸಮೀಪ ತಮ್ಮ ಸ್ವಂತ ಮನೆಯಲ್ಲಿ ಏಕಾಂಗಿಯಾಗಿ ವಾಸ ಮಾಡಿಕೊಂಡಿದ್ದರು. ಭಾನುವಾರ ಉಡುಪಿ ಸಮೀಪದ ಉದ್ಯಾವರದಲ್ಲಿ ಕ್ರಿಕೆಟ್ ಮ್ಯಾಚ್ ಒಂದರಲ್ಲಿ ಭಾಗವಹಿಸಿ ಬಹುಮಾನ ಪಡೆದು ಮನೆಗೆ ಆಗಮಿಸಿದ್ದ, ಇವರು ಸೋಮವಾರ ಮಧ್ಯಾಹ್ನ ಮನೆಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು ಎನ್ನಲಾಗಿದೆ. ತದನಂತರ ಸ್ಥಳೀಯರು ಇವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇವರು ಆಸ್ಪತ್ರೆಯಲ್ಲಿ ಮತಪಟ್ಟಿದ್ದರು. ಮೃತ ವಿಜಯ ಕಾರಂತ ಎಡಗೈ ಪಕ್ಕೆಲುಬಿನ ಭಾಗದಲ್ಲಿ ರಾಡ್ ಹೊಕ್ಕ ರೀತಿಯಲ್ಲಿ ಗಾಯವಾಗಿದ್ದು, ಘಟನೆಯ ಕುರಿತು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದರು. ವಿಜಯ್ ಕಾರಂತ ಉತ್ತಮ ಕ್ರಿಕೆಟ್ ಆಟಗಾರನಾಗಿ ರಾಜ್ಯ ಮಟ್ಟದಲ್ಲಿ ಬಹಳಷ್ಟು ಹೆಸರು ಪಡೆದಿದ್ದರು. ಜತೆಗೆ ವೃತ್ತಿಯಲ್ಲಿ ಕ್ಯಾಟರಿಂಗ್ ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈತನ ತಾಯಿ ಹಲವು ವರ್ಷಗಳ ಹಿಂದೆ ನಿಧನರಾಗಿದ್ದು, ತಂದೆ ಭಾಸ್ಕರ ಕಾರಂತ ಅಡಿಗೆ ವತ್ತಿಯವರಾಗಿದ್ದು, ಮಂಗಳೂರಿನಲ್ಲೇ ನೆಲೆಸಿದ್ದಾರೆ ಎನ್ನಲಾಗಿದೆ. ಮೃತ ವಿಜಯ ಕಾರಂತರ ಅಣ್ಣ ಉಮೇಶ್ ಕಾರಂತ ಸುರತ್ಕಲ್ ಸಮೀಪದ ದೇವಸ್ಥಾನ ಒಂದರಲ್ಲಿ ಅರ್ಚಕ ವತ್ತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
