ಕಾರ್ಕಳ: ಇಲ್ಲಿನ ಬಂಡೀಮಠ ಬಸ್ ನಿಲ್ದಾಣದ ಮುಂಭಾಗದಲ್ಲಿಇರುವ ಮೂಡುಗಣಪತಿ ದೇವಸ್ಥಾನದ ಅರ್ಚಕ ಗೋಪಿನಾಥ್ ಪುರಾಣಿಕ್ ಮನೆಯಲ್ಲಿ ಹೆಣ್ಣು ಶಿಶುವೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಏಕಕಾಲಕ್ಕೆ ದಾಳಿ ನಡೆಸಿ ಶಿಶುವನ್ನು ವಶಕ್ಕೆ ಪಡೆದು ದತ್ತು ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿದೆ.

archaka
ಮಕ್ಕಳಿಲ್ಲದ ಗೋಪಿನಾಥ್ ಪುರಾಣಿಕ್ ಮನೆಯಲ್ಲಿ ಬಾಲಕನೊಬ್ಬನಿದ್ದಾನೆ. ಆದರೆ ಇತ್ತೀಚೆಗೆ ಶಿಶು ಕಂಡುಬಂದ ಹಿನ್ನೆಯಲ್ಲಿ ಇಲಾಖೆ ಈ ದಾಳಿ ನಡೆಸಿದೆ. ಇಲಾಖೆ ಅರ್ಚಕರಲ್ಲಿ ದತ್ತು ಸ್ವೀಕಾರದ ದಾಖಲೆ ಪತ್ರ ಕೇಳಿದೆ. ಕಾನೂನು ಪ್ರಕಾರ ದತ್ತು ಸ್ವೀಕಾರ ನಡೆಸಿದರೆ ಮಾತ್ರ ಮಗುವನ್ನು ಸಾಕಲು ಸಾಧ್ಯ, ಇಲ್ಲವಾದಲ್ಲಿ ಅಸಾಧ್ಯ ಎಂದು ಮಕ್ಕಳ ಕಲ್ಯಾಣ ಘಟಕದ ಅಧ್ಯಕ್ಷ ಬಿಕೆ. ನಾರಾಯಣ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *