ಮಂಗಳೂರು: 14ರ ಹರೆಯದ ಅಪ್ರಾಪ್ತೆ ಜತೆಗೆ ಮೊಬೈಲ್ ಮೂಲಕ ಪ್ರೀತಿಯ ನಾಟಕ ವಾಡುತ್ತಿದ್ದ ವಿವಾಹಿತ ಹೊಟೇಲ್ ಮಾಲೀಕನಿಗೆ ಆಕೆಯ ಮನೆಮಂದಿ ಸರಿಯಾಗಿ ತದುಕಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಿನ್ನೆ ತೊಕ್ಕೊಟ್ಟು ವಿನಲ್ಲಿ ನಡೆದಿದೆ.

goosa
ಪಂಡಿತ್‍ಹೌಸ್ ನಿವಾಸಿ ಬಶೀರ್ (32) ಪೊಲೀಸ್ ವಶವಾದವನು. ಎರಡು ವಿವಾಹ ವಾಗಿರುವ ಈತ ಇಬ್ಬರು ಹೆಂಡಿರಿಗೂ ತಲಾಖ್ ನೀಡಿರುವುದಾಗಿ ತಿಳಿದುಬಂದಿದೆ. ಆದರೂ ತನ್ನ ಚಪಲತೆಯನ್ನು ಬಿಡದ ಬಶೀರ್ ಕೆಲ ಸಮಯ ಗಳಿಂದ ತೊಕ್ಕೊಟ್ಟು ಸಮೀಪದ ಅಪ್ರಾಪ್ತೆ ಬಾಲಕಿ ಜತೆಗೆ ಮೊಬೈಲ್ ಮೂಲಕ ಗುಪ್‍ಚುಪ್ ಮಾತು ಆರಂಭಿಸಿದ್ದನೆನ್ನಲಾಗಿದೆ. ಆಗಾಗ ಮನೆಗೆ ಹೋಗಿ ಆಕೆಗೆ ಕಿರುಕುಳ ನೀಡಲು ಯತ್ನಿಸುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಬಾಲಕಿ ಮನೆಮಂದಿಯಲ್ಲಿ ವಿಷಯ ತಿಳಿಸಿ ದ್ದಳು. ಅದರಂತೆ ನಿನ್ನೆ ಓಮ್ನಿ ಕಾರಿನಲ್ಲಿ ಬಾಲಕಿ ಸಮೇತ ಮನೆಮಂದಿ ತೊಕ್ಕೊಟ್ಟುವಿನ ಬಶೀರ್‍ಗೆ ಸೇರಿರುವ ಟಿಕ್ಕಾ ಪಾಯಿಂಟ್ ಹೊಟೇಲಿನತ್ತ ಆಗಮಿ ಸಿದ್ದರು. ಅಲ್ಲಿ ಬಾಲಕಿಯನ್ನು ಬಶೀರ್ ಜತೆ ಮಾತನಾ ಡಲು ಬಿಟ್ಟಿದ್ದು, ಆತ ಮಾತನಾಡುತ್ತಿರುವ ಸಂದರ್ಭ ದಲ್ಲೇ ಹಿಂದಿನಿಂದ ಬಂದ ತಂಡ ಕೈಗೆ ಸಿಕ್ಕ ವಸ್ತುಗಳಲ್ಲಿ ಸರಿಯಾಗಿ ತದುಕಿದ್ದಾರೆ. 15 ನಿಮಿಷಗಳ ಕಾಲ ಹಲ್ಲೆ ಮುಂದುವರಿದಿದ್ದು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಬಶೀರ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಬಾಲಕಿ ಮನೆಮಂದಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಅಲ್ಲಿ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ ಎಂದು ತಿಳಿದುಬಂದಿದೆ .
ಹಲ್ಲೆ ತಡೆದ ಹಿಂದು ಮಹಿಳೆ
ಬಶೀರ್ ಮೇಲೆ ತಂಡ ಎರ್ರಾಬಿರ್ರಿಯಾಗಿ ಹಲ್ಲೆ ನಡೆಸುತ್ತಿದ್ದಂತೆ ಅಲ್ಲೇ ಇದ್ದ ಹೊರಜಿಲ್ಲೆಯ ಹಿಂದು ಮಹಿಳೆ ` ಆತನಿಗೆ ಹೊಡೆಯದಂತೆ ತಡೆಹಿಡಿದಿದ್ದರು. ಅಲ್ಲದೆ ಆತ ಹಸಿದಾಗ ಊಟ ಕೊಡುತ್ತಾನೆ. ಅಂತಹವನಲ್ಲ ಆತ, ಯಾರೂ ಹೊಡೆಯಬೇಡಿ ಎಂದು ಅಡ್ಡಬರುತ್ತಿದ್ದರು. ಈ ವೇಳೆ ಹಲ್ಲೆ ನಡೆಸುತ್ತಿದ್ದ ತಂಡದವರಲ್ಲಿದ್ದ ಓರ್ವ `ನಿಮ್ಮ ಮಗಳಿಗೆ ಹೀಗಾದ್ರೇ ಬಿಡ್ತೀರಾ ‘ ಅಂತಾ ಪ್ರಶ್ನಿಸಿದ್ದರು. ಆದರೂ ಪಟ್ಟು ಬಿಡದ ಮಹಿಳೆ `ಹೊಡೀಬೇಡಿ ಹೊಡೀಬೇಡಿ’ ಅಂತ ಹಲ್ಲೆ ನಡೆಸುತ್ತಿರುವವರ ಮೇಲೆ ಮುಗಿಬೀಳುತ್ತಿದ್ದಳು.

By suddi9

Leave a Reply

Your email address will not be published. Required fields are marked *