ಬಂಟ್ವಾಳ: ಬದಲಾವಣೆಯ ಮತ್ತು ಪೈಪೋಟಿಯ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ರೀತಿಯ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಸಾಮಾಜಿಕ ಬದಲಾವಣೆಯ ಕಾರ್ಯವನ್ನು ಸ್ಪಂದನ ವಾಹಿನಿ ಮಾಡಿದೆ ಎಂದು ಕೃಷಿಕ ಉಳಿಪ್ಪಾಡಿ ಗುತ್ತು ರಾಜೇಶ್ ನಾಯಕ್ ಮೆಚ್ಚುಗೆ ವ್ಯಕ್ತಪಟ್ಟರು.

2

1

3 (2)
ಅವರು ಸ್ಪಂದನ ವಾಹಿನಿ ಸ್ಪಂದನ ಸ್ಕಾಲರ್ ಸಿಫ್ ಅವಾರ್ಡನ ಕಲ್ಲಡ್ಕದ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ನಡೆದ ಮಕ್ಕಳ ಪರೀಕ್ಷಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಇನ್ನಷ್ಟು ಪ್ರತಿಭೆಗಳನ್ನು ಹೊರಹಾಕಲು ಸ್ಷಂದನ ವೇದಿಕೆ ಕಲ್ಪಿಸಿದೆ ಮತ್ತು ಈ ವಾಹಿನಿ ಸಮಾಜದಲ್ಲಿ ಈಗಾಗಲೇ ಉತ್ತಮ ಕೆಲಸ ಕಾರ್ಯಗಳನ್ನು ಗುರುತಿಸುವ ಕೆಲಸವನ್ನು ಮಾಡಿದೆ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿಧ್ಯಾರ್ಥಿಗಳ ಭವಿಷ್ಯ ಉತ್ತಮವಾಗಲಿ ಎಂದು ಹಾರ್ಯಸಿದರು.
ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕಿ ಅಕ್ಷತಾ ಉಪಸ್ಥಿತರಿದ್ದರು. ವಿಧ್ಯಾರ್ಥಿನಿ ಭಾಗ್ಯಶ್ರೀ ಸ್ವಾಗತಿಸಿ, ಚಾಂದಿನಿ ವಂದಿಸಿದರು

By suddi9

Leave a Reply

Your email address will not be published. Required fields are marked *