ಮಂಗಳೂರು: ವಿವಾಹಿತ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯ ಎಂಬಲ್ಲಿ ನಡೆದಿದ್ದು, ಮಂಗಳವಾರ ಬೆಳಕಿಗೆ ಬಂದಿದೆ. ಕೊಲೆಯಾದ ಕೂಲಿ ಕಾರ್ಮಿಕೆಯನ್ನು ಉತ್ತರ ಪ್ರದೇಶ ಮೂಲದ ಕಲ್ಪನಾ (25) ಎಂದು ಹೆಸರಿಸಲಾಗಿದೆ.

kole1

kole1

kole2
ಮನೆಯ ಬಚ್ಚಲು ಮನೆಯಲ್ಲಿ ಈಕೆಯ ರಕ್ತಸಿಕ್ತ ಶವ ಕಂಡು ಬಂದಿದ್ದು ಈಕೆಯ ಗಂಡ ರಾಜೇಶ್ ಎಂಬಾತ ಸೋಮವಾರ ರಾತ್ರಿ ಪಾಳಿಯ ಕೆಲಸ ಮುಗಿಸಿ ವಾಪಾಸ್ ಬಂದಾಗ ಕೊಲೆಕೃತ್ಯ ಕಂಡುಬಂದಿದೆ. ತಲೆಗೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಪೋಸ್ಟ್‍ಮಾರ್ಟಮ್‍ಗೆ ಕಳಿಸಲಾಗಿದ್ದು, ತಖೆಯಿಂದಷ್ಟೇ ರಹಸ್ಯ ಬಯಲಾಗಬೇಕಾಗಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *