ಶಬರಿಮಲೆ: ಮಕರ ಜ್ಯೋತಿ ಮಹೋತ್ಸವ ಸಂದರ್ಭ ಭಕ್ತರ ದಟ್ಟಣೆ ಹೆಚ್ಚುತ್ತಿದ್ದು, ಪಂಪಾ ನದಿಯಲ್ಲಿ ನಿತ್ಯ ಲಕ್ಷಾಂತರ ಮಂದಿ ಸ್ನಾನ ಮಾಡುತ್ತಿದ್ದಾರೆ. ದಿನಹೋದಂತೆ ಪಂಪಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಹಾಗೂ ಕಲುಷಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಕ್ಕಿನಾಡ ಅಣೆಕಟ್ಟುವಿನಿಂದ ಪಂಪಾ ನದಿಗೆ ದಿನಕ್ಕೆ ಮೂರು ಹೊತ್ತು ಹೆಚ್ಚುವರಿ ನೀರು ಬಿಡಲು ನಿರ್ಧರಿಸಲಾಗಿದೆ. ಪಂಪಾ ನದಿಯಲ್ಲಿ ಬ್ಯಾಕ್ಕೀರಿಯ ಪ್ರಮಾಣವನ್ನು ತಗ್ಗಿಸಲು ಕಾಕಿನಾಡ ಅಣೆಕಟ್ಟಿ ನಿಂದ ಅಲ್ಪ ಪ್ರಮಾಣದ ನೀರನ್ನು ಪಂಪಾ ನದಿಗೆ ಬಿಡಲಾಗುತ್ತಿದೆ.

male2

male1

ಮಂಡಲ ಹಾಗೂ ಮಕರ ಜ್ಯೋತಿ ಸಂದರ್ಭದಲ್ಲಿ ಮೂರು ಬಾರಿ ನೀರನ್ನು ಬಿಡಲಾಗುತ್ತಿದೆ. ಬ್ಯಾಕ್ಟಿರಿಯಾದ ಪ್ರಮಾಣ ನಿಶ್ಚಿತ ಪ್ರಮಾಣಕ್ಕಿಂತ ಹೆಚ್ಚಿಸಿರುವುದರಿಂದ ಸ್ನಾನ ಮಾಡುವ ಸಂದರ್ಭದಲ್ಲಿ ತುರಿಕೆ ಸಹಿತ ಜಲಜನ್ಯ ರೋಗಗಳು ಉಂಟಾಗಲು ಸಾಧ್ಯತೆ ಇದೆ. 100 ಮಿಲಿ ಲೀಟರ್ ನೀರಿನಲ್ಲಿ ಗರಿಷ್ಠ 5000 ಕೋಲಿಫಾರಂ ಬ್ಯಾಕ್ಟೀರಿಯಾ ಇರಬೇಕು. ಆದರೆ ಕಳೆದ ದಿನ ಮಾಲಿನ್ಯ ನಿಯಂತ್ರಣ ಮಂಡಳಿ ಪಂಪಾದ ಆರಾಟ್ ಕಡವ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಬ್ಯಾಕ್ಟೀರಿಯ ಪ್ರಮಾಣ 3500 ಇದೆ ಎಂದು ಪತ್ತೆ ಹಚ್ಚಿದೆ. ನಂತರ ವಿದ್ಯುತ್ ಮಂಡಳಿಯ ಅಧೀನದಲ್ಲಿರುವ ಕಾಕಿನಾಡ ಡ್ಯಾಮ್‌ನಿಂದ ನೀರು ತೆರೆದು ಬಿಟ್ಟು ಬ್ಯಾಕ್ಟೀರಿಯಾಗಳ ಸಮತೋಲನ ನಡೆಸಲು ತೀರ್ಮಾನಿಸಲಾಯಿತು. ಪಂಪಾ ನದಿಯ ನೀರಿನ ಗುಣಮಟ್ಟವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರತಿ ದಿನ ಪರಿಶೀಲಿಸುವುದು. ನೀರಿನಲ್ಲಿ ಪಿಎಚ್ ಮೌಲ್ಯ, ಆಕ್ಸಿಜನ್ ಅಳತೆ, ಕೋಲಿಫಾರಂ ಬ್ಯಾಕ್ಟೀರಿಯಾಗಳ ಪ್ರಮಾಣ, ಬಯೋಕೆಮಿಕಲ್ ಆಕ್ಸಿಜನ್ ಡಿಮಾಂಟ್(ಬಿಒಡಿ)ಮುಂತಾದುವುಗಳನ್ನು ತಪಾಸಣೆಗೊಳ ಪಡಿಸಲಾಗುವುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಎಂಜಿನಿಯರ್ ಟಿ.ಎ.ತಂಗಚ್ಚನ್ ತಿಳಿಸಿದ್ದಾರೆ.

ಸನ್ನಿಧಾನದಲ್ಲಿ ಕುಡಿಯುವ ನೀರಿನ ಪ್ರಧಾನ ಜಲ ಮಾರ್ಗವಾದ ಬೆಟ್ಟದಿಂದ ಬರುವ ನೀರಿನಲ್ಲಿ ಎರಡು ದಿವಸಗಳಿಗೊಮ್ಮೆ ಪಂಪಾ ಲ್ಯಾಬ್‌ನಲ್ಲಿ ತಪಾಸಣೆ ನಡೆಸಿ ಗುಣಮಟ್ಟವನ್ನು ಪರಿಶೀಲಿಸಲಾಗುವುದು. ಪಂಪಾ, ಸನ್ನಿಧಾನ, ನಿಲಯಕ್ಕಲ್‌ಗಳಲ್ಲಿ ಮಾಲಿನ್ಯ ನಿರ್ಮೂಲನೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಅಧಿಕವಾಗಿ ನೀರು ಉಪಯೋಗಿಸುವುದಕ್ಕೆ ಸನ್ನಿಧಾನದಲ್ಲಿ ಒಂಬತ್ತು ಕೇಂದ್ರಗಳಲ್ಲಿ ನೀರಿನಲ್ಲಿ ಕ್ಲೋರಿನ್ ಪ್ರಮಾಣವನ್ನು ಪ್ರತೀ ದಿನ ಪರಿಶೀಲಿಸಲಾಗುವುದು. ದೇವಸ್ವಂ ಮೆಸ್, ಪೊಲೀಸ್ ಮೆಸ್, ನಡಪಂದಲ್, ಅರವನ ಪ್ಲಾಂಟ್, ಪಾಂಡಿತಾವಳಂ, ಮಾಲಿಕಪುರದಲ್ಲಿ ನೀರಿನ ಸಂಗ್ರಹ, ಶರಂಕುತ್ತಿ, ಹೊಟೇಲ್‌ಗಳಲ್ಲಿ ಅತೀ ಹೆಚ್ಚು ನೀರನ್ನು ಉಪಯೋಗಿಸುವುದು.

ಬಾಗಿಲು ತೆರೆಯುವುದು 3.00, ನಿರ್ಮಾಲ್ಯ ದರ್ಶನ 3.05, ಅಭಿಷೇಕ 3.15, ತುಪ್ಪಾಭಿಷೇಕ 3.15-7.15, ಗಣಪತಿ ಹೋಮ 3.30, ಉಷಾಪೂಜೆ 7.30, ತುಪ್ಪಾಭಿಷೇಕ 8.00-10.00, ಮಧ್ಯಾಹ್ನ ಪೂಜೆ 12.30, ಬಾಗಿಲು ಮುಚ್ಚುವುದು 1.30, ಬಾಗಿಲು ತೆರೆಯುವುದು 3.00, ದೀಪಾರಾಧನೆ 6.30, ಪುಷ್ಪಾಭಿಷೇಕ 6.45, ಅತ್ತಾಳ ಪೂಜೆ 10.00, ಬಾಗಿಲು ಮುಚ್ಚುವುದು 11.3

ಮಕರ ಜ್ಯೋತಿ ಮಹೋತ್ಸವದ ಅಂಗವಾಗಿ ಮಾಳಿಗಪುರಂ ಭೂತಬಲಿ ಉತ್ಸವ ಜ.14ರಂದು ಆರಂಭಗೊಳ್ಳು ವುದು. ಮಕರ ಸಂಕ್ರಮಣ ಪೂಜೆ ಕಳೆದು ರಾತ್ರಿ 9.30ಕ್ಕೆ ಮಾಳಿಗಪುರಂನಲ್ಲಿ ಉತ್ಸವ ಆರಂಭಗೊಳ್ಳು ವುದು. ಪಂದಳಂನಿಂದ ಚಿನ್ನಾಭರಣಗಳ ಜತೆ ತರಲಾಗುವ ಧ್ವಜ, ಹಣೆಪಟ್ಟಿ ಕಟ್ಟಿದ ಆನೆ, ಆಸ್ರಕೊಡೆ, ವಾದ್ಯಘೋಷಗಳ ಜತೆ ಭೂತಬಲಿ ನಡೆಯಲಿದೆ. ಜ.18ರ ತನಕ ಪ್ರತೀ ದಿನ ಭೂತ ಬಲಿ ನಡೆಯುವುದು. ಜ.17ರಂದು ಹದಿನೆಂಟು ಮೆಟ್ಟಲು ಬಳಿ ತನಕ 18ರಂದು ಶರಂಕುತ್ತಿ ತನಕ ಭೂತಬಲಿ ನಡೆಯಲಿದೆ.

By suddi9

Leave a Reply

Your email address will not be published. Required fields are marked *