ಮಂಗಳೂರು: ಸ್ಯಾಂಡಲ್‍ವುಡ್‍ನ ಬಹಬೇಡಿಕೆಯ ನಟ ಸುದೀಪ್ ಅವರು ಇಂದು ಮಧ್ಯಾಹ್ನ ಧರ್ಮಸ್ಥಳದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮನಿಸಿ ಪೂಜೆ ಸಲ್ಲಿಸಿ ತೆರಳಿದ್ದಾರೆ. ಹಲವಾರು ವರ್ಷಗಳಿಂದ ಪೂಜೆ ಸಲ್ಲಿಸುತ್ತಿರುವ ಸುದೀಪ್ ಅವರು ಇಂದು ಸುಬ್ರಹ್ಮಣ್ಯಕ್ಕೆ ಭೇಟಿಯಾಗುತ್ತಿರುವುದನ್ನು ಬಹಳ ಗೌಪ್ಯವನ್ನಾಗಿಡಲಾಗಿತ್ತು. ಪೂಜೆ ಸಲ್ಲಿಸಿದ ಬಳಿಕ ಸುದೀಪ್ ಅವರು ಯಾರೊಂದಿಗೂ ಮಾತಾಡದೆ ತನ್ನ ಪಾಡಿಗೆ ತಾನು ತೆರಳಿದ್ದು ವಿಶೇಷವಾಗಿತ್ತು. ದೇವಸ್ಥಾನದ ಮೂಲಗಳೂ ಸಹ ಸುದೀಪ್ ಕ್ಷೇತ್ರ ಭೇಟಿಯನ್ನು ಗೌಪ್ಯವಾಗಿಟ್ಟಿತ್ತು.

