ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಸೋಮವಾರ ಶುಭಾರಂಭಗೊಂಡ ಕಚ್ಚೂರು ಕ್ರೆಡಿಟ್ ಸೊಸೈಟಿ ನಾಲ್ಕನೇ ಶಾಖೆಯನ್ನು ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಬಿ.ದಿನೇಶ ಭಂಡಾರಿ ಉದ್ಘಾಟಿಸಿದರು. ಸೊಸೈಟಿ ಅಧ್ಯಕ್ಷ ಬಾಲಕೃಷ್ಣ ಭಂಡಾರಿ, ಕಚ್ಚೂರು ಕ್ಷೇತ್ರ ಆಡಳಿತ ಮೊಕ್ತೇಸರ ಗಂಗಾಧರ ಭಂಡಾರಿ, ನಿರ್ಧೇಶಕ ರಾಜಾ ಬಂಟ್ವಾಳ, ಸುಂದರ ಭಂಡಾರಿ, ರಘುವೀರ ಭಂಡಾರಿ, ಉಪನ್ಯಾಸಕ ಪ್ರೊ.ನಾರಾಯಣ ಭಂಡಾರಿ, ಕಿಶೋರ್ ಸೋರ್ನಾಡು, ವ್ಯವಸ್ಥಾಪಕ ಎಂ.ಪದ್ಮನಾಭ, ಪುರಸಭಾ ಸದಸ್ಯ ಬಿ.ಮೋಹನ್ ಮತ್ತಿತರರು ಇದ್ದರು.

