ಸುದ್ದಿ9 ಬಂಟ್ವಾಳ: ಸಹಕಾರಿ ಸಂಸ್ಥೆಯನ್ನು ಸೇವಾ ನಿಷ್ಠೆಯಿಂದ ಎತ್ತರಕ್ಕೆ ಬೆಳೆಸಿದಾಗ ಸೇವೆಯನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯುತ್ತದೆ ಎಂದು ಮಾಜಿ ಶಾಸಕ ಪದ್ಮನಾಭ ಶೆಟ್ಟಿ ಹೇಳಿದರು.
ಅವರು ಪೊನ್ನೋಡಿಯಲ್ಲಿ ನಡೆದ ಬಂಟ್ವಾಳ ತಾಲೂಕು ಕೃಷಿಯುತ್ಪನ್ನ ಸಹಕಾರಿ ಮಾರಾಟ ಸಂಘದ ಕಾರ್ಯದರ್ಶಿ ರಿಚಾರ್ಡ್ ಡಿ’ಸೋಜಾ ಮತ್ತು ವೀಣಾ ಡಿ’ಸೋಜಾ ದಂಪತಿಗಳ ವಿದಾಯ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಹಕಾರಿ ಸಂಘದ ಅಭಿವೃದ್ಧಿಯಲ್ಲಿ ಸಿಬಂದಿ ವರ್ಗದ ಜೊತೆ ಆಡಳಿತ ಮಂಡಳಿಯ ಸಹಕಾರ ಕೂಡ ಅಷ್ಡೇ ಪ್ರಾಮುಖ್ಯತೆ ಪಡೆಯುತ್ತದೆ. ಸಿಬಂದಿಗಳು ಸಹಕಾರಿ ಸಂಸ್ಥೆಯಿಂದ ನಿವೃತ್ತಿ ಹೊಂದಿದರು ಸಹಕಾರಿ ತತ್ವದಿಂದ ನಿವೃತ್ತಿ ಹೊಂದಬಾರದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಕೃಷಿಯುತ್ಪನ್ನ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ವಹಿಸಿದ್ದರು. ವೇದಿಕೆಯಲ್ಲಿ ಲಕ್ಷ್ಮೀ ನಾರಾಯಣ ಉಡುಪ ಉಪಸ್ಥಿತರಿದ್ದರು. ಇದೇ ಸಂದರ್ಭ ತಾಲೂಕಿನ ವಿವಿಧ ಸಹಕಾರಿ ಸಂಘಗಳಲ್ಲಿ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದ ಕಾರ್ಯದದರ್ಶಿಗಳಾದ ಭಾಸ್ಕರ್, ಯು. ಭಾಸ್ಕರ್, ಕೆ.ವಾಸು ಸಪಲ್ಯ, ರವೀಂದ್ರ. ಪಿ, ಶೀನ ಶೆಟ್ಟಿ, ಮಾಧವ, ಬೂಬ.ಕೆ., ಪ್ರಭಾಕರ ನಾಯಕ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿಲಾಯಿತು.
ಲೆಕ್ಕಪಾಲಕ ಧರ್ಮಪಾಲ ಭಂಡಾರಿ ಸ್ವಾಗತಿಸಿ, ಬಿ.ಟಿ. ನಾರಾಯಣ ಭಟ್ ವಂದಿಸಿದರು

