ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ನೀಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಇದೇ 29ರಿಂದ 2ರತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.
29ರಂದು ರಂಗಪೂಜೆ, 30ರಂದು ಬೆಳಿಗ್ಗೆ ಮೃತ್ಯುಂಜಯ ಹೋಮ, ರಾತ್ರಿ ವಿಷ್ಣುಮೂರ್ತಿ ದೈವಕ್ಕೆ ನೇಮೋತ್ಸವ, 31ರಂದು ಮಧ್ಯಾಹ್ನ ದೇವರ ಬಲಿ ಉತ್ಸವ, ರಾತ್ರಿ ಕೊಡಮಣಿತ್ತಾಯಿ ದೈವಕ್ಕೆ ನೇಮೋತ್ಸವ, ಜ.1ರಂದು ಇಲ್ಲಿನ ಬ್ರಹ್ಮಬೈದರ್ಕಳ ಗರಡಿಯಲ್ಲಿ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
