ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಶಾಂತಿಅಂಗಡಿ ನುಸ್ರತ್ ಮಿಲಾದುನ್ನಬಿ ಸಂಘದ ವತಿಯಿಂದ ಇದೇ 28ರಿಂದ ಜ.1ರತನಕ 21ನೇ 21ನೇ ವಾರ್ಷಿಕೋತ್ಸವ ಮತ್ತು ಮತಪ್ರವಚನ ಹಾಗೂ ಮಿಲಾದುನ್ನಬಿ ದಿನಾಚರಣೆ ಕಾರ್ಯಕ್ರಮ ಇಲ್ಲಿನ ಮಿತ್ತಬೈಲು ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸುವರು. ಇದೇ ವೇಳೆ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರನ್ನು ಸನ್ಮಾನಿಸಲಾಗುವುದು.
ಪ್ರತಿದಿನ ರಾತ್ರಿ ನಡೆಯುವ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಲ್ಲೂರು-ಬದ್ರಿಯಾ ನಗರ ಖತೀಬ್ ಬಿ.ಯು. ಉಬೈದುಲ್ಲಾ ಅಲ್-ಅಝ್ಹರಿ, ಮಿತ್ತಬೈಲು ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ನಂದಾವರ ಖತೀಬ್ ಎನ್.ಎಚ್. ಆದಂ ಫೈಝಿ, ಗುಡ್ಡೆಅಂಗಡಿ ಕರೀಂ ಫೈಝಿ ಕುಂತೂರು ಪ್ರವಚನಗೈಯುವರು.
ಅಂತಿಮವಾಗಿ ಮದ್ರಸ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಹಾಗೂ ರಬೀವುಲ್ ಅವ್ವಲ್ ಚಾಂದ್, ಮಿಲಾದುನ್ನಬೀ ಆಚರಣೆ, ಕೂಟು ಝಿಯಾರತ್, ಮೌಲೂದ್ ಪಾರಾಯಣ ಹಾಗೂ ಅನ್ನದಾನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹನೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
