ಮೂಡುಬಿದರೆ: ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ವಿಭಾಗ, ರಾಷ್ಟ್ರೀಯ ಸೇವಾ ಕೋಶ ಇದರ ಸಹಯೋಗದಲ್ಲಿ ಒಂದು ವಾರ ನಡೆಯುವ ರಾಷ್ಟ್ರೀಯ ಭಾವೈಕ್ಯ ಶಿಬಿರವನ್ನು ಶ್ರೀಮಹಾವೀರ ಕಾಲೇಜಿನಲ್ಲಿ ಬುಧವಾರ ಉದ್ಘಾಟಿಸಲಾಯಿತು.
ರಾಷ್ಟ್ರೀಯ ಭಾವೈಕ್ಯ ಶಿಬಿರದ ಸಾಂಸ್ಕೃತಿಕ ಮೆರವಣಿಗೆಗೆ ಪ್ರೊ. ಬೈರಪ್ಪ ಚಾಲನೆ ನೀಡಲಾಯಿತು

ಯುವಜನಸೇವೆ ಮತ್ತು ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಶಿಬಿರ ಉದ್ಘಾಟಿಸಿದರು.ಯವಕರಲ್ಲಿ ದೇಶ ಪ್ರೇಮ ಹಾಗೂ ಐಖ್ಯತೆಯನ್ನು ಮೂಡಿಸುವಲ್ಲಿ ಎನ್ಎಸ್ಎಸ್ ಪಾತ್ರ ದೊಡ್ಡದು. 2015ರಲ್ಲಿ ಮಂಗಳೂರು ವಿವಿ ಎನ್ಎಸ್ಎಸ್ ಮೂಲಕ ಒಂದು ಲಕ್ಷ ಯುನಿಟ್ ರಕ್ತ ಮತ್ತು 3 ಲಕ್ಷ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ.ಶಿಸ್ತು, ಒಳ್ಳೆಯ ನಾಯಕತ್ವದ ಗುಣಗಳನ್ನು ಎನ್ಎಸ್ಎಸ್ ವಿದ್ಯಾಥರ್ಿಗಳಿಂದ ಕಾಣಬಹುದು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬೈರಪ್ಪ ಆಧ್ಯಕ್ಷತೆ ವಹಿಸಿ, ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು ದೇಶದ ವಿಭಿನ್ನ ಭಾಷೆ, ವೈವಿದ್ಯಮಯ ಸಂಸ್ಕೃತಿಗಳ ಅನಾವರಣದಿಂದ ದೇಶದ ಐಖ್ಯತೆ ಹೆಚ್ಚುತ್ತದೆ. ಶಿಸ್ತು, ಒಳ್ಳೆಯ ನಾಯಕತ್ವದ ಗುಣಗಳನ್ನು ಎನ್ಎಸ್ಎಸ್ ವಿದ್ಯಾಥರ್ಿಗಳಿಂದ ಕಾಣಬಹುದು ಎಂದರು.
ಎನ್ಎಸ್ಎಸ್ ರಾಜ್ಯ ಸಂಯೋಜನಾಧಿಕಾರಿ ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಕನರ್ಾಟಕದಲ್ಲಿ ಮೂರು ಲಕ್ಷ ಎನ್ಎಸ್ಎಸ್ ವಿದ್ಯಾಥರ್ಿಗಳಿದ್ದಾರೆ. ಭಾರತ ವೈವಿದ್ಯತೆಯಲ್ಲಿ ಏಕತೆಯನ್ನು ಕಂಡ ದೇಶ. ಬೇರೆ ಬೇರೆ ರಾಜ್ಯದ ಜನ ಒಂದೆಡೆ ಬೆರೆತಾಗ ಸಮಾನತೆ, ಜಾತ್ಯತೀತ ಮನೋಭಾವ ಕಾಣಸಿಗುತ್ತದೆ. ಭಾವೈಕ್ಯ ಶಿಬಿರದ ಆಶಯ ಕೂಡ ಅದೇ ಆಗಿದೆ. ರಾಜ್ಯದ ಬೇರೆ ಬೇರೆ ಕಡೆ ನಡೆಯುತ್ತಿರುವ ಇಂತಹ ಹತ್ತು ಕಾರ್ಯಕ್ರಮಗಳಿಗೆ ರಾಜ್ಯ ಸಕರ್ಾರ ಹೆಚ್ಚುವರಿಯಾಗಿ 50 ಲಕ್ಷ ರೂ ಅನುದಾನ ಬಿಡುಗಡೆ ಮಾಡುವ ಮೂಲಕ ಪ್ರೋತ್ಸಾಹವನ್ನು ನೀಡಿದೆ ಎಂದರು.
ಎನ್ಎಸ್ಎಸ್ ಅಧಿಕಾರಿ ಪ್ರೊ.ಪ್ರವೀಣ್ ಉಪಸ್ಥಿತರಿದ್ದರು. ಮಂಗಳೂರು ವಿವಿ ಎನ್ಎಸ್ಎಸ್ ಸಂಯೋಜಕಿ ಪ್ರೊ. ವಿನೀತಾ ಸ್ವಾಗತಿಸಿದರು. ಆಶಾ ಶಾಲೆಟ್ ಡಿಸೋಜಾ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಚಂದ್ರಶೇಖರ್ ದೀಕ್ಷಿತ್ ವಂದಿಸಿದರು.
