ದೆಹಲಿ: 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದ್ದೂರಿನಲ್ಲಿ ಎಲ್ಟಿಟಿಇಯ ಮಾನವ ಬಾಂಬರ್ ದಾಳಿಗೆ ಬಲಿಯಾದ ಅಂದಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರನ್ನು ಹತ್ಯೆಗೈಯ್ಯಲು ಎಲ್ಟಿಟಿಇ ಪ್ಲ್ಯಾನ್ ಬಿ ಸಿದ್ಧಪಡಿಸಿಕೊಂಡಿತ್ತು ಎಂದು ಪೊಲೀಸರ ಕೈಗೆ ಸಿಕ್ಕಿರುವ ಮೃತ ಶಿವರಾಸನ್ ಡೈರಿಯಿಂದ ಬಹಿರಂಗವಾಗಿದೆ.
ದೆಹಲಿ ಯೋಜನೆಯಲ್ಲಿ ಕಾಂಗ್ರೆಸ್ ಮುಖಂಡ ಮತ್ತು ರಾಜೀವ್ ಗಾಂಧಿಯ ಆಪ್ತ ಮಣಿಶಂಕರ್ ಅಯ್ಯರ್ ಪತ್ನಿ ಸುನೀತ್ರ ದೂರದ ಸಂಬಂಧಿಗೆ ಸೇರಿದ್ದ ಟ್ರಾವೆಲ್ ಏಜನ್ಸಿಯ ನೌಕರನೊಬ್ಬನನ್ನು ಬಳಸುವ ಕುರಿತು ಡೈರಿಯಲ್ಲಿ ಉಲ್ಲೇಖವಿದೆ. 1991ರ ಜುಲೈಯಲ್ಲಿ ವಿಚಾರಣಾ ಅಧಿಕಾರಿಗಳ ಕೈಗೆ ಸಿಕ್ಕಿದ್ದ ಈ ಡೈರಿಯಲ್ಲಿ ವಿ. ಕಲ್ಯಾಣಸುಂದರಮ್, ಪ್ರೆಸಿಡೆಂಟ್ ಟ್ರಾವೆಲ್ ಸವರ್ಿಸ್, 811 ಅರುಣಾಚಲ್ ಬಿಲ್ಡಿಂಗ್, ಬಾರಾಕಂಭಾ ರೋಡ್, ಕನೌಟ್ ಪ್ಲೇಸ್, ನ್ಯೂಡೆಲ್ಲಿ-11 ಎಂಬ ವಿಳಾಸ ಪತ್ತೆಯಾಗಿತ್ತು. ಈ ವಿಳಾಸದ ಜಾಡು ಹಿಡಿದು ತನಿಖೆ ನಡೆಸಿದಾಗ ಕಲ್ಯಾಣಸುಂದರಮ್ ಎಂಬ ವ್ಯಕ್ತಿ ಪ್ರೆಸಿಡೆಂಟ್ ಟ್ರಾವೆಲ್ ಏಜನ್ಸಿಯಲ್ಲಿ ಉದ್ಯೋಗಿಯಾಗಿದ್ದು 2004ರಲ್ಲಿ ಕೆಲಸ ಬಿಟ್ಟಿರುವುದಾಗಿ ತಿಳಿದುಬಂದಿತ್ತು. ಚೆನ್ನೈಯಲ್ಲಿ ವಾಸವಾಗಿದ್ದ ಕಲ್ಯಾಣಸುಂದರಮ್ನನ್ನು ವಿಚಾರಿಸಿದಾಗ ಶಿವರಾಸನ್ ತಮ್ಮನ್ನು ಸಂಪಕರ್ಿಸಿಯೇ ಇಲ್ಲ ಮತ್ತು ಎಲ್ಟಿಟಿಇಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ತೀವ್ರ ತನಿಖೆಯ ನಂತರ ಕಲ್ಯಾಣಸುಂದರಮ್ ಸಂಪರ್ಕವನ್ನು ಎಲ್ಟಿಟಿಇಗೆ ಅವರ ಚಿಕ್ಕಪ್ಪ ಜಗದೀಶನ್ ಎಂಬವರು ನೀಡಿರುವುದು ಬಯಲಾಗಿತ್ತು.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಮುಖ್ಯಸ್ಥ ಕೆ. ರಘುತ್ತಮನ್ ಇಡೀ ಯೋಜನೆ ರೂಪುಗೊಂಡ ಬಗ್ಗೆ ವಿವರಿಸುತ್ತಾರೆ. ರಾಜೀವ್ ಹತ್ಯೆಯ ಹಲವು ತಿಂಗಳುಗಳ ಮೊದಲೇ ಶಿವರಾಸನ್ ಈ ಬಗ್ಗೆ ಕಾರ್ಯ ಪ್ರವೃತ್ತನಾಗಿದ್ದ. ಮಾನವ ಬಾಂಬರ್ ಮತ್ತು ತಂಡದ ಸದಸ್ಯರು ಉಳಿದುಕೊಳ್ಳಲು ಚೆನ್ನೈಯಲ್ಲಿ ಸುರಕ್ಷಿತ ಮನೆಯೊಂದನ್ನು ಖರೀದಿಸಲಾಗಿತ್ತು. ಮಾನವ ಬಾಂಬರ್ನ್ನು ರಾಜೀವ್ ಗಾಂಧಿ ಸಮೀಪಕ್ಕೆ ಕರೆದೊಯ್ಯಲು ಕಾಂಗ್ರೆಸ್ ಸಾಂಸದ ಮರಗತಮ್ ಚಂದ್ರಶೇಖರ್ ಸಹಾಯ ಪಡೆಯಲಾಯಿತು. ಇದರಿಂದ ಆಕೆಯ ಮೇಲೆ ಯಾರೂ ಅನುಮಾನ ಪಡಲಿಲ್ಲ. ಎಪ್ರಿಲ್ 28ರಂದು ಚೆನ್ನೈಯ ಮತ್ತೊಂದು ಸುರಕ್ಷಿತ ಮನೆಯಲ್ಲಿ ಸೋನಿಯಾ ಎಂಬ 17 ವರ್ಷದ ಮಾನವ ಬಾಂಬರ್ನ್ನು ದೆಹಲಿ ಯೋಜನೆಗಾಗಿ ಅಣಿಗೊಳಿಸಲಾಯಿತು. ಆಕೆಯನ್ನು ದೆಹಲಿಗೆ ಕರೆದೊಯ್ಯುವ ಸಲುವಾಗಿ ಎಲ್ಟಿಟಿಇಯ ಮುಖಂಡನ ತಂದೆಯಾಗಿದ್ದ ಕನಗಸಭಾಪತಿಯನ್ನು ನಿಯೋಜಿಸಲಾಯಿತು. ಮೇ ತಿಂಗಳಲ್ಲಿ ದೆಹಲಿಗೆ ಆಗಮಿಸಿದ ಕನಗಸಭಾಪತಿ ರಾಜಧಾನಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆಯುತ್ತಾನೆ. ಅಸಲಿಗೆ ಸರಕಾರಿ ವಸತಿನಿಲಯವಾಗಿದ್ದ ಆ ಮನೆಯನ್ನು ಅದರ ಮಾಲಕ ಕಾನೂನುಬಾಹಿರವಾಗಿ ಕನಗಸಭಾಪತಿಗೆ ಬಾಡಿಗೆಗೆ ನೀಡಿರುತ್ತಾನೆ. ಆತನಿಗೆ ಐದು ಸಾವಿರ ಮುಂಗಡ ಹಣ ನೀಡಿದ ಸಭಾಪತಿ ಕೆಲವೇ ದಿನಗಳಲ್ಲಿ ತನ್ನ ಮೊಮ್ಮಗಳಾದ ಅದಿರೈ ಅಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಬರುವುದಾಗಿ ತಿಳಿಸುತ್ತಾನೆ.

ರಾಜೀವ್ ಗಾಂಧಿಯನ್ನು ಶ್ರೀಪೆರಂಬದ್ದೂರಿನಲ್ಲೇ ಹತ್ಯೆ ಮಾಡುವ ಬಗ್ಗೆ ಶಿವರಾಸನ್ಗೆ ವಿಶ್ವಾಸವಿತ್ತು. ಆದರೆ ಸಂಘಟನೆಯ ಗುಪ್ತಚರದಳದ ಮುಖ್ಯಸ್ಥೆ ಪೊಟ್ಟು ಅಮ್ಮ ದೆಹಲಿಯಲ್ಲಿ ಹತ್ಯೆ ಮಾಡುವುದು ಸೂಕ್ತ ಎಂದು ತಿಳಿಸಿದ್ದಳು. ಆ ಕಾರಣಕ್ಕಾಗಿ ಪ್ಲ್ಯಾನ್ ಬಿ ಸಿದ್ಧಪಡಿಸಲಾಗಿತ್ತು. ಆದರೆ ತಮಿಳುನಾಡಿನಲ್ಲೇ ರಾಜೀವ್ ಹತ್ಯೆಯಾಗುವ ಮೂಲಕ ದೆಹಲಿ ಯೋಜನೆಯನ್ನು ಕೈಬಿಡಲಾಯಿತು. ಘಟನೆಯ ಸಮಯದಲ್ಲಿ ದೆಹಲಿಯಲ್ಲೇ ಇದ್ದ ಸಭಾಪತಿ ಮತ್ತು ಸೋನಿಯಾಳನ್ನು ಬಂಧಿಸಲಾಯಿತು. ಒಂಬತ್ತು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ಇಬ್ಬರನ್ನು ನ್ಯಾಯಾಲಯ ಶ್ರೀಪೆರಂಬದ್ದೂರು ಘಟನೆಗೆ ಸಂಬಂಧವಿಲ್ಲ ಎಂಬ ಕಾರಣಕ್ಕೆ ಬಿಡುಗಡೆ ಮಾಡಿತು. ಹೊರಬಂದವರೇ ಸ್ವಿಜರ್ಲ್ಯಾಂಡ್ಗೆ ಹಾರಿ ಅಲ್ಲೇ ನೆಲೆಸಿದರು. ಅದಿರೈ ಪ್ರಕರಣದ ಮತ್ತೊಬ್ಬ ಆರೋಪಿ ವಿಘ್ನೇಶ್ವರನ್ನನ್ನು ವಿವಾಹವಾದಳು. 24 ವರ್ಷಗಳ ಹಿಂದೆ ನಡೆದ ರಾಜೀವ್ ಹತ್ಯೆಗೆ ಸಂಬಂಧಪಟ್ಟಂತೆ ಕೆಲವು ಆಘಾತಕಾರಿ ಅಂಶಗಳು ಇತ್ತಿಚೆಗೆ ಬಯಲಾಗುತ್ತಿದ್ದು ಕೆಲವು ಹೊಸ ಖುಲಾಸೆಗಳು ಆಗುತ್ತಿವೆ. ಪ್ರೆಸಿಡೆಂಟ್ ಟ್ರಾವೆಲ್ ಸವರ್ೀಸ್ ಬಗ್ಗೆ ಕಾಂಗ್ರೆಸ್ ಮುಖಂಡ ಮಣಿಶಂಕರ್ ಐಯ್ಯರ್ ಬಳಿ ಕೇಳಿದಾಗ ಅವರು ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಯಾರೂ ಸಂಪಕರ್ಿಸಿಲ್ಲ. ಆ ಟ್ರಾವೆಲ್ ಏಜನ್ಸಿ ಮುಖಾಂತರ ನಾನು ಟಿಕೆಟ್ ಬುಕ್ ಮಾಡುವುದೂ ಇಲ್ಲ ಎಂದು ಹೇಳಿಕೊಂಡಿದ್ದಾರೆ.
