-ಸುದ್ದಿ9 ಅಭಿಮಾನಿ ಎಂ.ಕೆ.ಕರುಣಾಕರ್ ಬಂಟ್ವಾಳ.

ದ.ಕ ಜಿಲ್ಲೆಯ ಜೀವನದಿಯಾಗಿರುವ ನೇತ್ರಾವತಿ ನದಿಯನ್ನು ತಿರುಗಿಸಿ ಅದನ್ನು ಉತ್ತರ ಕನರ್ಾಟಕಕ್ಕೆ ಹರಿಯಬಿಡುವ ಪ್ಲಾನ್ ಸಿದ್ಧವಾಗುತ್ತಿದೆ. ಮಾಚರ್್ 3ರರಂದು ಚಿಕ್ಕಬಳ್ಳಾಪುರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಗೆ ಶಂಕು ಸ್ಫಾಪನೆ ನೆರವೇರಿಸಲಿದ್ದಾರೆ. ಅದಕ್ಕಾಗಿಯೇ ಸೋಮವಾರ ಜಲ್ಲೆಯ ಹಲವಾರು ಪ್ರಮುಖ ಸಂಘಟನೆಗಳು ಜಿಲ್ಲಾ ಬಂದ್ಗೆ ಕರೆ ನೀಡಿವೆ.

ಫೆ.26ರಿಂದಲೇ ಬಸ್ಗಳ ಮೇಲೆ ಜಿಲ್ಲಾ ಬಂದ್ ಬಗ್ಗೆ ಪೋಸ್ಟರ್ ಹಚ್ಚಲಾಗಿದೆ. ಆದುದರಿಂದ ಮಾಚರ್್ 3ರ ಬಂದ್ಗೆ ಅಭೂತಪೂರ್ವ ಯಶಸ್ಸು ಸಿಗುವ ಸಾಧ್ಯತೆ ಇದೆ.

ದ.ಕ ಜಿಲ್ಲೆ ಬಂದ್ ಮಾಡದಿದ್ರೆ ವಿಧಿ ಇಲ್ಲ:

ಸರಕಾರಕ್ಕೆ ನೇತ್ರಾವತಿ ಯೋಜನೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಮುನಿದುಕೊಂಡಿದ್ದಾರೆ ಎಂದು ತೋರಿಸಲು ನಾವು ಈ ಬಂದ್ಗೆ ಸಂಪೂರ್ಣ ಸಹಕಾರವನ್ನು ನೀಡಬೇಕು. ಭಾಗಶಃ ಅಥವಾ ಬಂದ್ ನಡೆಯದೇ ಇದ್ದರೆ ನೇತ್ರಾವತಿ ನದಿ ತಿರುವಿಗೆ ದ.ಕ ಜಿಲ್ಲೆಯ ಜನತೆಯ ಬೆಂಬಲ ಇದೆ ಎಂಬ ಸಂದೇಶ ಸರಕಾರಕ್ಕೆ ಹೋಗುತ್ತದೆ. ಆದುದರಿಂದ ಈ ಬಂದ್ಗೆ ನಾವು ಅಭೂತಪೂರ್ವ ಸಹಕಾರ ನೀಡುವುದು ಅವಶ್ಯಕತೆಯಾಗಿದೆ.

ಜಿಲ್ಲೆಯ ಜನತೆಗೆ ಎತ್ತಿಹೊಳೆ ಯೋಜನೆಯ ಬಗ್ಗೆ ಗೊತ್ತಿಲ್ಲ:
ದ.ಕ. ಜಿಲ್ಲೆಯ ಜನತೆಗೆ ಎತ್ತಿನ ಹೊಳೆ ಯೋಜನೆಯ ಬಗ್ಗೆ ಅಷ್ಟಾಗಿ ಮಾಹತಿ ಇಲ್ಲ. ಚಿಕಬಳ್ಳಾಪುರದಲ್ಲಿ ಎತ್ತಿನ ಹೊಳೆಗೆ ಒಡ್ಡುಗಳನ್ನು ನಿಮರ್ಿಸಿ ಅದನ್ನು ಬರಪೀಡಿತ ಪ್ರದೇಶಗಳಿಗೆ ಹರಿಯಬಿಡುವುದು ಇದರ ಪ್ಲಾನ್. ಇದು ಎಷ್ಟು ಸಕ್ಸಸ್ ಆಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಅಷ್ಟು ಪ್ರಮಾಣದ ನೀರಿಲ್ಲ ಎಂಬುದು ಅಲ್ಲಿಗೆ ಅಧ್ಯಯನ ಪ್ರವಾಸ ಕೈಗೊಂಡವರಿಗೆ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾರೆ.

Nethravathi Nadi Thiruvu

ಅಲ್ಲದೆ ಕೆಲವು ಪರಿಸರಾಸಕ್ತ ಸಂಘಟನೆಗಳು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಎತ್ತಿನ ಹೊಳೆ ಹಿತರಕ್ಷಣಾ ಸಮಿತಿ ಚಿಕ್ಕಬಳ್ಳಾಪುರ ಈ ಯೋಜನೆಯನ್ನು ವಿರೋಧಿಸಿದ್ದಷ್ಟೇ ಅಲ್ಲದೆ ಅದರ ವಿರುದ್ಧ ಹೋರಾಟಕ್ಕೆ ಅಣಿಯಾಗಿದೆ. ಇದರ ಪ್ರಕಾರವೂ ಈ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಹೇಳಿಕೆ ನೀಡಿದೆ. ಈ ಯೋಜನೆಯಿಂದ ರಾಜ್ಯದಲ್ಲಿ ಪ್ರಾಕೃತಿಕ ಸಮತೋಲನ ತಪ್ಪಿಕೊಂಡು ಅನಾಹುತ ಸೃಷ್ಟಿಯಾಗುವ ಸಾಧ್ಯತೆ ಇದೆ. ಅಲ್ಲದೆ ಜೀವಜಂತು ಅಲ್ಲಿರುವ ಪ್ರಾಣಿ ಹಾಗೂ ಉರಗಗಳು ನಾಶವಾಗುವ ಸಾಧ್ಯತೆ ಇದೆ ಎಂದು ತನ್ನ ವರದಿ ನೀಡಿದೆ.

ಆದುದರಿಂದ ಜಿಲ್ಲೆಯ ಜನತೆಗೆ ಮಾರಕವಾಗಲಿದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿರುವ ಈ ಯೋಜನೆಯನ್ನು ಜಿಲ್ಲೆಯ ಜನತೆ ಸ್ಪಷ್ಟವಾಗಿ ವಿರೋಧಿಸಬೇಕಾಗುತ್ತದೆ.

By Suddi9 Author

Suddi9

Leave a Reply

Your email address will not be published. Required fields are marked *