ಬಂಟ್ವಾಳ:ಕಳೆದ 7 ವರ್ಷಗಳ ಹಿಂದೆ ಅರಣ್ಯ ಸಚಿವರಾಗಿದ್ದ ವೇಳೆ ಬಳ್ಳಾರಿ ಜಿಲ್ಲೆಯ ಹಂಪಿ ಗ್ರಾಮೀಣ ಪ್ರದೇಶದ ಜನರಿಗೆ ವಿವಿಧ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸಿರುವ ಹಿನ್ನಲೆಯಲ್ಲಿ ಅಲ್ಲಿನ ಕಲಾವಿದರ ನಿಯೋಗವೊಂದು ಮಾಜಿ ಅರಣ್ಯ ಸಚಿವ ಬಿ.ರಮಾನಾಥ ರೈ ಅವರನ್ನು ಕಳ್ಳಿಗೆಯಲ್ಲಿರುವ ಅವರ ನಿವಾಸಕ್ಕಾಗಮಿಸಿ ಅಭಿನಂದಿಸಿದ್ದಾರೆ.

ಹಂಪಿ ಚಿತ್ರ ಕಲಾವಿದ ಆನಂದ್ ಹಿರೇಮಠ್ ನೇತೃತ್ವದ ಕಲಾವಿದರ ನಿಯೋಗ ಶುಕ್ರವಾರ ಕಳ್ಳಿಗೆ ಮನೆಯಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಕಲಾವಿದ ಆನಂದ್ ಹಿರೇಮಠ್ ಅವರು ಸ್ವತಃ ತಯಾರಿಸಿದ ಬಿ.ರಮಾನಾಥ ರೈ ಅವರ ತೈಲವರ್ಣದ ಭಾವಚಿತ್ರಕ್ಕೆ ‘ಬಡವರ ಮಾಣಿಕ್ಯ’ ಹೆಸರಿನೊಂದಿಗೆ ಹಸ್ತಾಂತರಿಸಿ ಗಮನ ಸೆಳೆದರು.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು, ಪ್ರಮುಖರಾದ ಉಮೇಶ ನೆಲ್ಲಿಗುಡ್ಡೆ, ಶೈಲೇಶ್ ಪೂಜಾರಿ, ಸಂದೇಶ ಶೆಟ್ಟಿ, ವೆಂಕಪ್ಪ ಪೂಜಾರಿ ಬಂಟ್ವಾಳ ಮತ್ತಿತರರು ಈ ಸಂದರ್ಭ ಇದ್ದರು.
