ಬಂಟ್ವಾಳ: ಯಾವುದೇ ಒಂದು ಪ್ರತಿಭೆಗೆ ಅವಕಾಶ ಸಿಕ್ಕಾಗ ಅದು ಬೆಳಗಲು ಸಾಧ್ಯ ಎಂದು ಮಾಜಿ ಶಾಸಕೆ. ರುಕ್ಮಯ ಪೂಜಾರಿ ಹೇಳಿದರು.ಮಂಗಳವಾರ ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ 2026 -27 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಪ್ರತಿಭೆಯನ್ನು ಅಳೆಯಲು ಅಂಕಗಳೇ ಮಾನದಂಡವಲ್ಲ. ಪ್ರತಿಯೊಂದು ಮಗುವಿಗೂ ತನ್ನದೇ ಆದ ಸಾಮರ್ಥ್ಯವಿದೆ, ತನ್ನದೇ ಆದ ಕನಸಿದೆ, ತನ್ನದೇ ಆದ ಸಾಧನೆಯ ಹಾದಿಯಿದೆ. ಅಂತಹ ಅವಕಾಶವನ್ನು ಕಲ್ಪಿಸಿ ಕೊಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಧುಸೂದನ್ ಐತಲ್ ವಹಿಸಿದ್ದರು.
ಬಂಟ್ವಾಳ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ನಾಯಕ್ , ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಪದ್ಮನಾಭ ರೈ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಐಡಾ ಸುರೇಶ್, ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಚಂದನ್ ಜೈನ್, ಸದಸ್ಯರಾದ ಸುರೇಶ್, ನವೀನ್ ಅಬ್ಬುಬಕ್ಕರ್, ಅಮೀದ್ ಆಲಿ, ನಜೀರ್, ಮೊದಲಾದವರು ಉಪಸ್ಥಿತರಿದ್ದರು.
ಪದವೀಧರ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಸ್ವಾಗತಿಸಿ, ಕ್ಲಸ್ಟರ್ ಸಿ ಆರ್ ಪಿ ಜ್ಯೋತಿ ಪ್ರಸ್ತಾವನೆಗೈದರು.
