ಬಂಟ್ವಾಳ:ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು,ಧಾರ್ಮಿಕ, ರಾಜಕೀಯ, ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಂಬಡೆ ಬೈಲು ಚಂದ್ರಶೇಖರ ಭಂಡಾರಿಯವರನ್ನು ಶ್ರೀ ಮುದೆಲ್ ಮುಟ್ಟಿ ನಾಲ್ಕೈಯಿತ್ತಾಯ ದೈವಸ್ಥಾನದ ಅಭಿವೃದ್ಧಿ ಸಮಿತಿಯ ವತಿಯಿಂದ ಕ್ಷೇತ್ರದ ವಠಾರದಲ್ಲಿ ಗೌರವ ಅಭಿನಂದನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮುದೆಲ್ ಮುಟ್ಟಿ ನಾಲ್ಕೈಯಿತ್ತಾಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಹಾಬಲ ಕೊಟ್ಟಾರಿ, ಸಜಿಪ ಮುನ್ನೂರು ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಜಯಶಂಕರ್ ಬಾಸ್ರಿತ್ತಾಯ, ಡಾ| ಜಯಪ್ರಕಾಶ್ ತಪೋವನ ಅಲಾಡಿ,ನಾಲ್ಕೈಯಿತ್ತಾಯ ದೈವಸ್ಥಾನದ ಗಡಿಪ್ರದಾನರಾದ ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ್ ಭಂಡಾರಿ ಆಳ್ವರಪಾಲು, ಪರಾರಿಗುತ್ತುವಿನ ಹಿರಿಯರಾದ ರಮಾನಾಥ್ ಶೆಟ್ಟಿ, ದಯಾನಂದ್ ಶೆಟ್ಟಿ,ಪರಾರಿ ಗುತ್ತು,ಧೀರಜ್ ಶೆಟ್ಟಿ ಪರಾರಿಗುತ್ತು,ಗಂಗಾಧರ್ ಗಟ್ಟಿ ಅಲಾಡಿ,ಚಂದ್ರಶೇಖರ ಗಟ್ಟಿ,ಅಲಾಡಿ, ಸತೀಶ್ ಗಟ್ಟಿ ಅಲಾಡಿ, ಚರಣ್ ಜುಮಾದಿ ಗುಡ್ಡೆ,ಮನೋಜ್ ಕುಮಾರ್, ಸೀತಾರಾಮ ಶೆಟ್ಟಿ ಕಾಂತಾಡಿ ಗುತ್ತು, ಹರಿಪ್ರಸಾದ್ ಆಳ್ವರ ಪಾಲು, ರೋಹಿತ್ ಅಲಾಡಿ, ದೀಕ್ಷಿತ್ ಶೆಟ್ಟಿ, ದೈವಸ್ಥಾನದಗುತ್ತು ಮನೆತದವರು, ಚಾಕಿರಿವರ್ಗದವರು,ಗ್ರಾಮಸ್ಥರು ಭಾಗವಹಿಸಿದರು.
ಲಕ್ಷೀಶ್ ಆಳ್ವ ಸನ್ಮಾನ ಪತ್ರ ವಾಚಿಸಿದರು. ಮಲರಾಯ ದೈವಸ್ಥಾನದ ಗಡಿಪ್ರಧಾನರಾದ ಸುಕುಮಾರ್ ಬಂಟ್ವಾಳ್ ಸಾಗತಿಸಿದರು. ಶಿವಣ್ಣ ಖಂಡಿಗ ವಂದಿಸಿದರು.
