ಬಂಟ್ವಾಳ: ಸಮಾಜದಲ್ಲಿ ವ್ಯಕ್ತಿಗಳು ಎಷ್ಟೇ ಸಂಪತ್ತು, ಸೌಕರ್ಯ ಹೊಂದಿದರೂ ಆರೋಗ್ಯದಲ್ಲಿ ಏರುಪೇರುಗೊಂಡು ಆಂತಕದ ವಾತಾವರಣ ಉಲ್ಬಣಗೊಂಡಾಗ ಧೈರ್ಯ ತುಂಬಿ ಆಂತಕವನ್ನು ನಿವಾರಣೆ ಮಾಡಲು ವೈದ್ಯ ವೃತ್ತಿಯಿಂದ ಮಾತ್ರ ಸಾಧ್ಯ, ಈ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಸಾರ್ವಜನಿಕವಾಗಿ ಅಭಿನಂದನೆಗಳನ್ನು ಸಲ್ಲಿಸುವುದು ಶ್ಲಾಘನೀಯವಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯಪಟ್ಟಿದ್ದಾರೆ.


ಸಿದ್ದಕಟ್ಟೆ ಸ್ವಾಗತ ಬಿಲ್ಡಿಂಗ್ ಆವರಣದಲ್ಲಿ ದೀಪಾವಳಿ ಪ್ರಯುಕ್ತ  ನಡೆದ ಸಮಾರಂಭವೊಂದರಲ್ಲಿ ಸಿದ್ದಕಟ್ಟೆಯಲ್ಲಿ ಕಳೆದ 30 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿದ ಡಾ| ಕೃಷ್ಣಮೂರ್ತಿ ಯವರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ| ಕೃಷ್ಣಮೂರ್ತಿಯವರು ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುವುದರಿಂದ ನನಗೆ ತೃಪ್ತಿ ತಂದಿದೆ ಹಾಗೂ ಸಾರ್ವಜನಿಕ ಅಭಿನಂದನೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.


ಸಮಾರಂಭದಲ್ಲಿ ನಮ್ಮ ಕುಡ್ಲ  ಚಾನೆಲ್   ನಿರ್ದೇಶಕರಾದ ಶರಣ್ ಕರ್ಕೇರ, ಆದಿತ್ಯ ಕರ್ಕೇರ, ಹಿರಿಯರಾದ ಸಂಜೀವ ಶೆಟ್ಟಿ ಉಮ್ಮೆಟ್ಟು, ಸ್ವಾಗತ್ ಕಾಂಪ್ಲೆಕ್ಸ್ ಮಾಲಕರಾದ ಹರೀಶ್ ಶೆಟ್ಟಿ, ಯೋಗೀಶ್ ಶೆಟ್ಟಿಗಾರ್, ಬಾಬು ಶೆಟ್ಟಿ, ಕಾರ್ಯಕ್ರಮದಲ್ಲಿ ಸಿ. ಎ. ಬ್ಯಾಂಕ್ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಶಿವ ಗೌಡ, ಪ್ರಮುಖರಾದ ಕೇಶವ ಶಬರೀಶ , ಪ್ರಕಾಶ್ ಶೆಟ್ಟಿ, ಸ್ವಸ್ತಿಕ್, ಡಾ| ರಕ್ಷಿತ್ ಭಟ್,ಹೇಮಚಂದ್ರ, ಗೌಡ, ಗಣೇಶ ಹೊಳ್ಳ, ಸಂತೋಷ ಅಂಚನ್ ವಾರಿಜ ಮೋಹನ್, ಸುರೇಶ ಶೆಟ್ಟಿ ಕಾಮದೇನು,ಮೀನಾಕ್ಷಿ, ಸಂದ್ಯಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.ಸುರೇಶ್ ಶೆಟ್ಟಿ ಸಿದ್ದಕಟ್ಟೆ ಸ್ವಾಗತಿಸಿ,ವಂದಿಸಿದರು. 

By Suddi9