ಬಂಟ್ವಾಳ: ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಜನಾಂದೋಲನದ ಅಂಗವಾಗಿ ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಮ್ಟೂರು ಮತ್ತು ಗೋಳ್ತಮಜಲು ಬಿಜೆಪಿ ಶಕ್ತಿ ಕೇಂದ್ರಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಆಮ್ಟೂರು ಗ್ರಾಮದ ರಾಯಪ್ಪ ಕೋಡಿ ಲಕ್ಷದೀಪೋತ್ಸವ ಕಟ್ಟೆಯಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾ ಗೋಳ್ತಮಜಲು ಗ್ರಾಮ ಪಂಚಾಯತ್ ಕಚೇರಿವರೆಗೆ ಸಾಗಿತು. ಬಳಿಕ ಕಲ್ಲಡ್ಕ ಶ್ರೀರಾಮ ಮಂದಿರದ ಮುಂಭಾಗ ಮೇಲ್ಸ್ ತುವೆಯ ಕೆಳಭಾಗದಲ್ಲಿ ಹಕ್ಕೊತ್ತಾಯ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ಬಾಲಭವನ ನಿಗಮದ ಮಾಜಿ ಅಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್ ಅವರು ಮಾತನಾಡಿ, ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ ನೀತಿಯನ್ನು ಟೀಕಿಸಿದರು.
ಹಾಲು, ಮೊಸರು, ವಿದ್ಯುತ್, ಬಸ್ ಪ್ರಯಾಣ ದರ, ಇಂಧನದ ಮೇಲಿನ ತೆರಿಗೆ ಸೇರಿದಂತೆ ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಅಗತ್ಯವಾದ ವಸ್ತುಗಳು ಮತ್ತು ಸೇವೆಗಳ ದರ ಹೆಚ್ಚಳದಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಬೆಲೆ ಏರಿಕೆ ವಿಚಾರವಾಗಿ ಹೈಕೋರ್ಟ್ ಕೂಡ ಸರಕಾರದ ನೀತಿಗಳನ್ನು ವಿಮರ್ಶಿಸಿದೆ. ಉಚಿತ ಯೋಜನೆಗಳ ಹೆಸರಿನಲ್ಲಿ ಮತ್ತೊಂದೆಡೆ ಅಗತ್ಯ ವಸ್ತುಗಳ ದರ ಹೆಚ್ಚಳ ದಿಂದಾಗಿ ಜನಸಾಮಾನ್ಯರಿಗೆ ಹಬ್ಬ ಆಚರಿಸುವುದೇ ಕಷ್ಟಕರವಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಮಾತನಾಡಿ,ಜನರ ಜೀವನವನ್ನು ಸುಗಮಗೊಳಿಸುವುದೇ
ಸರಕಾರದ ಮುಖ್ಯ ಜವಾಬ್ದಾರಿ
ಹೊರತು, ಜನರ ಮೇಲೆ ಆರ್ಥಿಕ ಹೊರೆ ಹೇರುವುದಲ್ಲ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ. ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ ನೀತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನರ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಬಜ, ಶಿವಪ್ರಸಾದ್ ಶೆಟ್ಟಿ, ಶಕ್ತಿ ಕೇಂದ್ರದ ಪ್ರಮುಖರಾದ ಪ್ರವೀಣ್ ಕುಮಾರ್, ರಾಯಪ್ಪ ಕೋಡಿ, ನವೀನ್ ಗಟ್ಟಿ ನೆಟ್ಲ, ಪ್ರಮುಖರಾದ ಕಮಲಾಕ್ಷಿ ಪೂಜಾರಿ, ಲಖಿತಾ ಆರ್. ಶೆಟ್ಟಿ, ಚಿದಾನಂದ ಮುರಬೈಲು, ಕಲ್ಲಡ್ಕ ಸನತ್ ಕುಮಾರ್ ರೈ, ಹಿರಣ್ಮಯಿ, ಸಂಪತ್ ಕುಮಾರ್ ಕಡೇಶಿವಾಲಯ, ಜಿನರಾಜ್ ಕೋಟ್ಯಾನ್, ಅರವಿಂದ ರೈ, ನಾಗೇಶ್ ಭಂಡಾರಿ, ಆನಂದ ಶಂಬೂರು, ಪ್ರಭಾಕರ ಶೆಟ್ಟಿ ಬೈದರಡ್ಕ, ಯತೀಶ್ ಮೂಳಿಕೊಡಂಗೆ, ಕೌಶಿಲ್ ಶೆಟ್ಟಿ ಬಾಳಿಕೆ, ಜಯಶ್ರೀ ಕಲ್ಲಡ್ಕ, ಮಹಾಬಲ ಸಾಲಿಯಾನ್, ಶೇಖರ್ ಕೊಟ್ಟಾರಿ, ದಾಮೋದರ ಪೂಜಾರಿ, ರಾಜೇಶ್ ಕೊಟ್ಟಾರಿ, ವಿಕ್ರಂ ಕಲ್ಲಡ್ಕ, ಜಗನ್ನಾಥ ನರಹರಿನಗರ, ಕೇಶವ ಮೂರಬೈಲು, ಸುನಿಲ್ ಗೋಳ್ತಮಜಲು, ಬೇಬಿ ನೆಟ್ಲ, ವಾಣಿ ಪ್ರದೀಪ್, ವಾಣಿ ಸಂದೀಪ್, ಲಕ್ಷ್ಮಿ ಪ್ರಭು, ಸುಷ್ಮಾ, ಪವಿತ್ರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಸ್ವಾಗತಿಸಿದರು. ಮೋನಪ್ಪ ದೇವಸ್ಯ ವಂದಿಸಿದರು.
