ಬಂಟ್ವಾಳ: ಗ್ರಾಮೀಣ ಪ್ರದೇಶದ ಶಾಲೆಗೆ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ, ಸರಕಾರಿ ಶಾಲೆಯನ್ನು ಉಳಿಸುವುದು ಗ್ರಾಮಸ್ಥರ ಜವಾಬ್ದಾರಿಯಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.ಮಂಕುಡೆ ದ.ಕ.ಜಿ.ಪಂ.ಉ.ಹಿ.ಪ್ರಾ ಶಾಲೆಗೆ ಎಂ.ಆರ್.ಪಿ.ಎಲ್ ನ ಸಿ.ಎಸ್ .ಆರ್ ಅನುದಾನದಲ್ಲಿ ನಿರ್ಮಿಸಲಾದ ನೂತನ ಎರಡು ಕೊಠಡಿಗಳು ಮತ್ತು ಶೌಚಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಸಮುದಾಯದ ಸಹಕಾರದಿಂದ ಸರಕಾರಿ ಶಾಲೆ ಬೆಳೆಯುತ್ತದ್ದು, ಎಲ್ಲರೂ ಕೈ ಜೋಡಿಸಿ ಸರಕಾರಿ ಶಾಲೆಯನ್ನು ಬೆಳೆಸುವ ಕಾರ್ಯ ಆಗಬೇಕು ಎಂದು ಹೇಳಿದರು.
ಕಟ್ಟಡದ ಗುತ್ತಿಗೆದಾರ ಅಖಿಲ್ ರೈ, ಪ್ರಮುಖರಾದ ಅಭಿಷೇಕ್ ರೈ, ಹರೀಶ್ ಟೈಲರ್, ಮಾಧವ ಮಾವೆ,ರಾಜಾರಾಮ ಹೆಗ್ಡೆ,ದೇವಪ್ಪ ಪೂಜಾರಿ ಬಾಳಿಕೆ,ದಿನೇಶ್ ಅಮ್ಟೂರು, ಶಶಿಕಲಾ, ನತಾಲಿಯ, ಕೃಷ್ಣಪ್ಪ ಪೂಜಾರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಆಚಾರಿ, ಉಪಾಧ್ಯಕ್ಷೆ ಸುಪ್ರೀತ, ಲಕ್ಷ್ಮೀ ನಾರಾಯಣ ಅಡ್ಯಂತಾಯ, ಮುಖ್ಯ ಶಿಕ್ಷಕಿ ಜೆಸಿಂತ ಡಿ ‘ಸಿಲ್ವ,ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಹಳೆವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಶಾಲಾಭಿಮಾನಿಗಳು, ಶಿಕ್ಷಕ ವೃಂದ, ಅಂಗನವಾಡಿ ಶಿಕ್ಷಕಿಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.
