ಬಂಟ್ವಾಳ:ಅಮ್ಟಾಡಿ ಗ್ರಾಮದ ನಲ್ಕೆಮಾರು ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಯಿತು. ಅಮ್ಟಾಡಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ವಿಜಯ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ಜಯರಾಮ್ ತಲೆಂಬಿಲ, ಸಿಆರ್ ಪಿ ರವಿ,ಮುಖ್ಯೋಪಾಧ್ಯಾಯರು,
ಏರ್ಯ ಆಳ್ವ ಪೌಂಡೇಶನ್ ನ ಸದಸ್ಯ ಅಭಿನಂದನ್ ನಾಥ್ ಮೊದಲಾದವರಿದ್ದರು.ಈ ಸಂದರ್ಭ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದಾಮೋದರ ಏರ್ಯಾ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಕ್ಲಸ್ಟರ್ ವ್ಯಾಪ್ತಿಯ 16 ಶಾಲೆಗಳ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಿಸಿದ್ದರು. ನಲ್ಕೇಮಾರ್ ಶಾಲೆಗೆ 4 ಪ್ರಥಮ,3 ದ್ವಿತೀಯ ಹಾಗೂ 3 ತೃತೀಯ ಬಹುಮಾನ ಪಡೆಯಿತು.ರೇಖಾ ರಾವ್ ಕಾರ್ಯಕ್ರಮ ನಿರೂಪಿಸಿದರು.
