ಬಂಟ್ವಾಳ : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ನಡೆಸಲಾದ 2026ನೇ ಸಾಲಿನ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ತಾಲೂಕಿನ ವೀರಕಂಭ ಗ್ರಾಮದ ಲಕ್ಷ್ಯ ಡಿ ಕೇಪುಲಕೋಡಿ ಅವರು 70 ಶೇ. ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ.

ಕೇಪುಲಕೋಡಿ ದೀಪಕ್- ರಂಜಿತ ದಂಪತಿಯ ಪುತ್ರಿ ಯಾಗಿರುವ ಈಕೆ ಪ್ರಸ್ತುತ ಕಲ್ಲಡದಕ ದ.ಕ. ಜಿ. ಪಂ. ಹಿ. ಪ್ರಾ. ಶಾಲೆಯ 7 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.
ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ (ರಿ) ಪುತ್ತೂರು ಇದರ ಸಹ ಸಂಸ್ಥೆಯಾದ ನೃತ್ಯ ಕಲ್ಪ ಎರ್ಮೆ ಮಜಲ್ ಇಲ್ಲಿನ ನೃತ್ಯ ಗುರುಗಳಾದ ವಿದುಷಿ ಚೈತ್ರ ಪ್ರಜ್ವಲ್ ಶೆಟ್ಟಿ ಮಂಗಳೂರು ಇವರ ಶಿಷ್ಯೆ
