ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವತಿಯಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ತರಬೇತಿಗಳ ಉದ್ಘಾಟನಾ ಸಮಾರಂಭವು ಅ.18ರಂದು ಭಾನುವಾರ ನಡೆಯಾಲಿದೆ.
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ತರಬೇತಿಗಳ ಉದ್ಘಾಟರ ಸಮಾರಂಭ ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗುರುಗಳಾಗಿ ಶ್ರೀ ವಿದ್ವಾನ್ ಶ್ರೀ ಅಮಿತ್ ಕುಮಾರ್ ಬೆಂಗ್ರೆ ಹಾಗೂ ಭರತನಾಟ್ಯ ಗುರುಗಳಾಗಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಇವರು ತರಬೇತಿಯನ್ನು ನೀಡಲಿದ್ದಾರೆ. ಆಸಕ್ತರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಅಕ್ಟೋಬರ್ 18ರಂದು ಬೆಳಿಗ್ಗೆ ಪೊಳಲಿಯಲ್ಲಿ ನಡೆಯುವ ಈ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ, ತರಬೇತಿಗೆ ಹೆಸರು ನೋಂದಾಯಿಸಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿಯವರು ಪ್ರಕಟಣೆಯನ್ನು ತಿಳಿಸಿದ್ದಾರೆ.
