ಬಂಟ್ವಾಳ: ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಆಯೋಜಿಸಲಾದ ‘ವಿಕಸಿತ ಭಾರತ ಸಂಕಲ್ಪ ಸೇವಾಜ್ಯೋತಿ’ ಯಾತ್ರೆಗೆ ಬಿ.ಸಿ.ರೋಡ್ನ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಮುಂಭಾಗದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಚಾಲನೆ ನೀಡಿದರು.

ಈ ಸಂದರ್ಭ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಬಜ, ಶಿವಪ್ರದಾಸ್ ಶೆಟ್ಟಿ, ಪಕ್ಷ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸಂದೇಶ್ ಶೆಟ್ಟಿ ಅರೆಬೆಟ್ಟು, ವಿಕಾಸ್ ಪುತ್ತೂರು, ಸುಲೋಚನಾ ಜಿ.ಕೆ. ಭಟ್, ದಿನೇಶ್ ಅಮ್ಟೂರು, ಮಾಧವ ಮಾವೆ, ಗೋವಿಂದ ಪ್ರಭು, ದಿನೇಶ್ ಭಂಡಾರಿ, ಆರ್. ಸಿ.ನಾರಾಯಣ ರೆಂಜ, ಹರ್ಷಿಣಿ,ಹಿರಣ್ಮಯಿ,ಕಮಾಲಾಕ್ಷಿ ಪೂಜಾರಿ ಸಹಿತ ಹಲವರು ಉಪಸ್ಥಿತರಿದ್ದರು.

ಬಳಿಕ ರಾ.ಹೆ.ಯ ಮೂಲಕ ಸಾಗಿದ ಸೇವಾಜ್ಯೋತಿಯಾತ್ರೆ ಬ್ರಹ್ಮರಕೊಟ್ಲು ಸಮೀಪದ ಬಂಟವಾಳ ಬಂಟರ ಭವನದಲ್ಲಿ ಸಂಪನ್ನಗೊಂಡಿತು.ಇದೇ ವೇಳೆ ಜಿಲ್ಲೆಯ ಎಂಟು ಮಂಡಲಗಳಿಂದಲು ವಿವಿಧ ದೇವಳದ ವಠಾರದಿಂದ ಚಾಲನೆಗೊಂಡ ಸೇವಾಜ್ಯೋತಿ ಅಗಮಿಸಿತು.ಬಳಿಕ ಸಭಾಂಗಣದಲ್ಲಿ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಇದೇ ವೇಳೆ ಪ್ರಧಾನಿನರೇಂದ್ರ ಮೋದಿಯವರ ನೇರ ಪ್ರಸಾರದ ಪೂರ್ತಿ ಭಾಷಣವನ್ನು ಪರದೆಯ ಮೂಲಕ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು, ಸಂಸದರು,ಶಾಸಕರ ಸಹಿತ ಮುಖಂಡರು ಮೋದಿ ಪರವಾಗಿ ಜೈಕಾರ ಕೂಗಿದರು,
ಮೋದಿ…ಮೋದಿ…ಎಂದು ಘೋಷಣೆಯು ಮೊಳಗಿತು.ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಸೇರಿದ್ದರಲ್ಲದೆ ಸಭಾಂಗಣ ತುಂಬಿ,ಹೊರಭಾಗದಲ್ಲಿ ನಿಂತು ಮೋದಿಯವರ ಭಾಷಣ ಅಲಿಸಿದರಲ್ಲದೆ ಕಾರ್ಯಕ್ರಮವನ್ನು ವೀಕ್ಷಿಸಿದರು.
ಬಿಜೆಪಿ ಮಹಿಳಾ ಮೋರ್ಛಾ ಕಾರ್ಯಕರ್ತೆಯರು ಸಭಾಂಗಣದ ಮುಂಭಾಗದಲ್ಲಿ ಸುಂದರವಾದ ರಂಗೋಲಿಯನ್ನು ಬಿಡಿಸಿ ಗಮನಸೆಳೆದರು.
ಪೈಲೆಟ್ ಗೆ ಅಭಿನಂದನೆ :-
ಜೀವದ ಹಂಗು ತೊರೆದು ಸಹ ಪೈಲೆಟ್ ನೊಂದಿಗೆ ಹೋರಾಡಿ 180 ಮಂದಿ ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ”ವಿಕಸಿತ ಭಾರತ ಸಂಕಲ್ಪ ಸೇವಾಜ್ಯೋತಿ” ಸಮಾರೋಪ ಸಮಾರಂಭದಲ್ಲಿ ದ.ಕ.ಜಿಲ್ಲಾ ಬಿಜೆಪಿ ವತಯಿಂದ ಜಿಲ್ಲೆಯ ಜನತೆಯ ಪರವಾಗಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಅಭಿನಂದನೆಯನ್ನು ಸಲ್ಲಿಸಿದರು.
