ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವತಿಯಿಂದ ಸಂಗೀತ ಮತ್ತು ಭರತನಾಟ್ಯ ತರಗತಿಗಳು ಅ.18ರಂದು ಭಾನುವಾರ ಆರಂಭಗೊಳ್ಳಲಿದೆ.ಪೊಳಲಿ ದೇವಸ್ಥಾನದ ಸಭಾಂಗಣದಲ್ಲಿ ಬೆಳಿಗ್ಗೆ 9:00ಗೆ ಸರಿಯಾಗಿ ದೇವಳದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಇದರ ಉದ್ಘಾಟನಾ ಸಮಾರಂಭವು ನಡೆಯಲಿದೆ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಶಿಕ್ಷಕರಾಗಿ ಹುಬ್ಬಳ್ಳಿಯ ಪದ್ಮ ವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ ಸಂಗೀತ ಅಭ್ಯಾಸ ಮಾಡಿ, ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಸಂಗೀತದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದು, ಹಿಂದೂಸ್ತಾನಿ ಸಂಗೀತದಲ್ಲಿ ವಿದ್ವಾನ್ ಆಗಿರುವ ಶ್ರೀ ಅಮಿತ್ ಕುಮಾರ್ ಬೆಂಗ್ರೆ ಇವರು ನಡೆಸಿಕೊಡಲಿದ್ದಾರೆ. ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು ಕಲಾಶ್ರೀ ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ ಮತ್ತು ಕಲಾಶ್ರೀ ವಿದುಷಿ ನಯನಾ ವಿ. ರೈಯವರ ಶಿಷ್ಯೆಯಾಗಿದ್ದು ಭರತನಾಟ್ಯದಲ್ಲಿ ವಿದ್ವತ್ ಶಿಕ್ಷಣ ಪಡೆದಿರುವ ವಿದೂಷಿ ಯೋಗೀಶ್ವರಿ ಜಯಪ್ರಕಾಶ್ ಇವರು ಭರತನಾಟ್ಯ ತರಗತಿಯನ್ನು ನಡೆಸಿಕೊಡಲಿದ್ದಾರೆ. ಎಂದು ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್ , ವೆಂಕಟೇಶ್ ನಾವಡ ಪೊಳಲಿ, ಚಂದ್ರಶೇಖರ್ ಭಂಡಾರಿ, ಚಂದ್ರಹಾಸ ಪಲ್ಲಿಪಾಡಿ, ನಾರಳ ಚಂದ್ರಹಾಸ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಕಿಶೋರ್ ಪಲ್ಲಿಪಾಡಿ ,ಯಶವಂತ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಮೋ: 8105179144, 9535098025
