ಪೊಳಲಿ: ಐತಿಹಾಸಿಕ ಪ್ರಸಿದ್ಧ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅತೀ ಶೀಘ್ರದಲ್ಲಿ ನೂತನ ಸಂಗೀತ ಮತ್ತು ನಾಟ್ಯ ಶಾಲೆ ಆರಂಭಗೊಳ್ಳಲಿದೆ .
ಜ್ಞಾನ ಮತ್ತು ಕಲೆಗಳ ಅಧಿಪತಿ ತಾಯಿ ರಾಜರಾಜೇಶ್ವರಿ:

ಶಾರದಾ ದೇವಿ ಎಂದರೆ ಸರಸ್ವತಿ ದೇವಿ (ಜ್ಞಾನ, ಸಂಗೀತ ಮತ್ತು ಸಾಹಿತ್ಯದ ದೇವತೆ). ಆದರೆ ಅಧ್ಯಾತ್ಮಿಕ ತತ್ತ್ವದಲ್ಲಿ, ಜ್ಞಾನ, ಇಚ್ಛೆ ಮತ್ತು ಕ್ರಿಯೆಗಳಿಗೆ ಮೂಲವಾದ ಪರಾಶಕ್ತಿಯೇ ಎಲ್ಲಾ ರೂಪಗಳಲ್ಲೂ ನೆಲೆಸಿದ್ದಾಳೆ.
ಲಲಿತಾ ಪರಮೇಶ್ವರಿ ಅಥವಾ ರಾಜರಾಜೇಶ್ವರಿಯು ಸಕಲ ವಿದ್ಯಾ ಸ್ವರೂಪಿಣಿಯಾಗಿರುವುದರಿಂದ, ಅವಳೇ ಶಾರದಾ ಸ್ವರೂಪಿಣಿಯೂ ಹೌದು….
ಸಂಗೀತ ಮತ್ತು ನಾಟ್ಯ ಶಾಲೆಯ ಮೂಲಕ ಮಕ್ಕಳಿಗೆ ಅಥವಾ ಕಲಾ ಆಸಕ್ತರಿಗೆ ಕಲೆಗಳನ್ನು ಕಲಿಸುವುದು, ಆ ಮೂಲಕ ದೇವಿಗೆ ಕಲಾಪೂಜೆ ಸಲ್ಲಿಸುವುದು ಬಹಳ ಪುಣ್ಯದ ಕೆಲಸ. ಸಂಗೀತವು ಮನಸ್ಸಿಗೆ ಶಾಂತಿಯನ್ನೂ, ನಾಟ್ಯವು ದೈಹಿಕ ಹಾಗೂ ಭಾವನಾತ್ಮಕ ಅಭಿವ್ಯಕ್ತಿಯನ್ನೂ ನೀಡಿ ದೇವಿಯ ಸಾಕ್ಷಾತ್ಕಾರದ ಅನುಭವ ತರುತ್ತದೆ.
ಈ ನವರಾತ್ರಿಯ ಪುಣ್ಯ ದಿನಮಾನಗಳಲ್ಲಿ ತಾಯಿ ರಾಜರಾಜೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಸಂಗೀತ ಮತ್ತು ನಾಟ್ಯ ತರಗತಿಗಳು ಆರಂಭವಾಗಿರೋದು ಶ್ರೀ ದೇವರ ಇಚ್ಛೆಯೇ ಸರಿ.
ಶಾಸ್ತ್ರೀಯ ಹಿನ್ನೆಲೆಯುಳ್ಳ ಸಂಗೀತ ಮತ್ತು ನಾಟ್ಯ ಕಲೆಯನ್ನು ವಿದ್ವತ್ ಮಟ್ಟದವರೆಗೆ (ವಿದ್ವತ್ ಮಟ್ಟದವರೆಗೆ) ವ್ಯವಸ್ಥಿತವಾಗಿ ಕಲಿಸುವ ಈ ಸದುದ್ದೇಶವು ಸಾಕಾರಗೊಂಡಿದೆ.
ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಆಡಳಿತ ಮಂಡಳಿಯ ಸಹಕಾರದೊಂದಿಗೆ ಅತೀ ಶೀಘ್ರದಲ್ಲಿ ಪೊಳಲಿ ಕ್ಷೇತ್ರದಲ್ಲಿ ಸಂಗೀತ ಶಾಲೆ ತರಗತಿಗಳು ಅಧಿಕೃತವಾಗಿ ಆರಂಭವಾಗಲಿವೆ.
ಸಂಗೀತ ಮತ್ತು ಕಲೆಯ ಹಾದಿಯಲ್ಲಿ ಆಸಕ್ತಿಯಿರುವ ಪ್ರತಿಯೊಬ್ಬರಿಗೂ ಇದೊಂದು ಸುವರ್ಣ ಅವಕಾಶವಾಗಿದೆ.
