ಬಂಟ್ವಾಳ:ಬಂಟ್ವಾಳ ಉಪವಿಭಾಗದ ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್ ಅರುಣ್ ಪ್ರಕಾಶ್ ಡಿ’ಸೋಜ ಇವರ ಮೊಡಂಕಾಪು ಮನೆಗೆ ಲೋಕಾಯುಕ್ತ ಎಸ್ಪಿ ಸದಾನಂದ ವಣರ್ೇಕರ್ ನೇತೃತ್ವದ ಪೊಲೀಸರ ತಂಡವು ಶನಿವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿ ರೂ 1.20ಕೋಟಿಗೂ ಮಿಕ್ಕಿ ಮೊತ್ತದ ಆಸ್ತಿ ಪತ್ತೆ ಹಚ್ಚಿದ್ದಾರೆ.
20btl-Lokayuktha
ಬಂಟ್ವಾಳದಲ್ಲಿ ಆರ್ಸಿಸಿ ಮನೆ, ಮಂಗಳೂರು ಕದ್ರಿಯಲ್ಲಿ ಫ್ಲ್ಯಾಟ್, 2 ಬ್ಯಾಂಕ್ ಲಾಕರ್, 1 ಶ್ವಿಪ್ಟ್ ಮತ್ತು ಝೆನ್ ಕಾರು, ಒಂದೂವರೆ ಕಿಲೋ ಚಿನ್ನ, ಅರ್ಧ ಕಿಲೋ ಬೆಳ್ಳಿ, ಭೂ ದಾಖಲೆ ಪತ್ರ, ಬ್ಯಾಂಕ್ ಉಳಿತಾಯ ಖಾತೆ ಮತ್ತಿತರ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಡಿವೈಎಸ್ಪಿ ವಿಠಲದಾಸ ಪೈ, ಉಮೇಶ್ ಶೇಠ್, ಇನ್ಸ್ಪೆಕ್ಟರ್ ದಿಲೀಪ್ ಕುಮಾರ್, ವಿಜಯಪ್ರಸಾದ್, ನವೀನ್ ಜೋಗಿ, ಭಾಸ್ಕರ್ ದೇರಳಕಟ್ಟೆ, ಸುದರ್ಶನ್, ಹರಿಶ್ಚಂದ್ರ, ಶಿವಪ್ರಸಾದ್, ಪ್ರವೀಣ್, ಸುಮತಿ, ಲೋಕೇಶ್, ರಾಧೇಶ್, ಸಲೀಂ ಮತ್ತಿತರ 15ಕ್ಕೂ ಮಿಕ್ಕಿ ಮಂದಿ ಕಾಯರ್ಾಚರಣೆಯಲ್ಲಿ ಪಾಲ್ಗೊಂಡರು.
ಪ್ರತಿಕ್ರಿಯೆ:
ಮೊಡಂಕಾಪುವಿನಲ್ಲಿ ತಾಯಿಮನೆ ಮತ್ತು ಮಂಗಳೂರಿನಲ್ಲಿ ಬಾಡಿಗೆ ಫ್ಲಾಟ್ ಇದ್ದು, ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿರುವ ಪತ್ನಿಗೆ ಸೇರಿದ ಚಿನ್ನಾಭರಣ ಲಾಕರ್ನಲ್ಲಿತ್ತು ಎಂದು ಎಂಜಿನಿಯರ್ ಅರುಣ್ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *