ಬಂಟ್ವಾಳ: ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘವು 2025-26 ನೇ ಸಾಲಿನಲ್ಲಿ‌ ಒಟ್ಟು 52.53 ಕೋಟಿ ರೂ ವ್ಯವಹಾರ ನಡೆಸಿ  10,44,691.45 ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಕೆ.ರವೀಂದ್ರ ಕಂಬಳಿ ಅವರು ತಿಳಿಸಿದ್ದಾರೆ.


ಮಂಗಳೂರಿನ ಬಲ್ಮಠದಲ್ಲಿರುವ “ಶಾಂತಿ ನಿಲಯ” ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಸಂದರ್ಭ ಸದಸ್ಯರಿಗೆ ಶೇ.10 ಡಿವಿಡೆಂಟನ್ನು ಘೋಷಿಸಿದರು.
ಕಳೆದ ವರ್ಷಾಂತ್ಯಕ್ಕೆ ಕೃಷಿ ಯಂತ್ರೋಪಕರಣ ವ್ಯಾಪಾರ ವಹಿವಾಟಿನಿಂದ 6.03 ಕೋಟಿ ರೂ. ಮತ್ತು ಬ್ಯಾಂಕಿಂಗ್ ವಿಭಾಗದಲ್ಲಿ 46.50 ಕೋಟಿ ರೂ.ವ್ಯವಹಾರ ಸಾಧಿಸಿದೆ.2026-27ನೇ ಸಾಲಿಗೆ 8.00 ಕೋಟಿ ರೂ.ವ್ಯಾಪಾರ ವಹಿವಾಟಿನ ಗುರಿ ಹಾಗೂ ಬ್ಯಾಂಕಿಂಗ್ ವ್ಯವಹಾರದಲ್ಲಿ 65 ಕೋಟಿ ರೂ ಗುರಿಯನ್ನು  ಹೊಂದಲಾಗಿದೆ. ಆಡಿಟ್ ವರ್ಗಿಕರಣದಲ್ಲಿಯ ‘ಬಿ’ ತರಗತಿಯ ಸ್ಥಾನಮಾನ ಪಡೆದಿದೆ ಎಂದು  ಅಧ್ಯಕ್ಷ ಕೆ.ರವೀಂದ್ರ ಕಂಬಳಿ ಸಭೆಗೆ ಮಾಹಿತಿ‌ನೀಡಿದರು.


ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ನಿರ್ದೇಶಕರುಗಳಾದ ಮೋನಪ್ಪ ಶೆಟ್ಟಿ ಎಕ್ಕಾರು, ಎನ್.ಎ ರವಿಬಸಪ್ಪ, ಭಾಸ್ಕರ್.ಎಸ್.ಕೋಟ್ಯಾನ್, ಜಯರಾಮ ಪಿ.ಸಿ. ಕರುಣಾಕರ ಶೆಟ್ಟಿ.ಬಿ, ಕೃಷ್ಣಯ್ಯ ಮೂಲೆತೋಟ, ಜಿ.ತಿಮ್ಮ ಪೂಜಾರಿ, ಬಿ.ಭಾಸ್ಕರ ಕಾಮತ್, ನೀಲಪ್ಪ ನಾಯ್ಕ, ಶಾರದಾ ಭಾಗವತ್, ಪ್ರಭಾಮಾಲಿನಿ, ವೆಂಕಪ್ಪ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುಖ್ಯಕಾರ್ಯನಿರ್ವಾಹಕ ಪ್ರೇಮರಾಜ್ ಭಂಡಾರಿ ವರದಿ ವಾಚಿಸಿದರು..

By Suddi9

Leave a Reply

Your email address will not be published. Required fields are marked *