ಗುರುಪುರ : ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಧ್ಯಪ್ರದೇಶದ ಅಮೆಚೂರ್ ಸ್ಪೋರ್ಟ್ಸ್ ಕಿಕ್‌ಬಾಕ್ಸಿಂಗ್ ಅಸೋಸಿಯೇಶನ್ ಸೆ. ೮ರಿಂದ ೧ರವರೆಗೆ ಆಯೋಸಿದ ಭಾರತ ಸರ್ಕಾರ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಮಾನ್ಯತೆ ಪಡೆದ ಕಿಕ್ ಬಾಕ್ಸಿಂಗ್ ರಾಷ್ಟಿçÃಯ ಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಪ್ರತಿನಿಧಿಸಿದ್ದ ಐಕೆಎಂಎ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನದೊಂದೊದಿಗೆ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಪ್ರತಿನಿಧಿಸಿದ್ದ ಐಕೆಎಂಎ ಕ್ರೀಡಾಪಟುಗಳಾದ ಜಾನ್ವಿ ಕೆ. ಬಂಗೇರ ಅವರು ೪೫ ಕೆಜಿ ಪಾಯಿಂಟ್ ಫೈಟ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಕಿಕ್ ಲೈಟ್ ವಿಭಾಗದಲ್ಲಿ ಬೆಳ್ಳಿಯ ಪದಕ ಗಳಿಸಿದ್ದಾರೆ. ಈಕೆ ಕುಡುಪು ಜಾನಿ ಸುಜನ್‌ದಾಸ್ ಮತ್ತು ಜಾಸ್ಮಿನ್ ದಂಪತಿಯ ಪುತ್ರಿಯಾಗಿದ್ದು, ಮಂಗಳೂರಿನ ಎಸ್‌ಡಿಎಂ ಲಾ ಕಾಲೇಜು ವಿದ್ಯಾರ್ಥಿನಿಯಾಗಿದ್ದಾರೆ.

ಆನ್ಶಿ ಎನ್. ಎಂ ಅವರು ೫೨ ಕೆಜಿ ಲೋ ಕಿಕ್ ವಿಭಾಗದಲ್ಲಿ ಬೆಳ್ಳಿಯ ಪದಕ ಹಾಗೂ ಅವ್ನಿ ಎನ್. ಎಂ. ಅವರು ೫೨ ಕೆಜಿ ಲೋ ಕಿಕ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅವಳಿ ಸಹೋದರಿಯಾಗಿರುವ ಇವರ ಕೂಡ ಎಸ್‌ಡಿಎಂ ಲಾ ಕಾಲೇಜು ವಿದ್ಯಾರ್ಥಿನಿಯಾಗಿದ್ದಾರೆ.

ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ಜಾನ್ವಿ ಮತ್ತು ಆನ್ಶಿ ಅವರು ಕಾಂಬೋಡಿಯದಲ್ಲಿ ನಡೆಯಲಿರುವ ಏಪ್ಯನ್ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಮೂವರಿಗೆ ನಿತಿನ್ ಎನ್. ಸುವರ್ಣ ಮತ್ತು ಸಂಪತ್ ಕುಮಾರ್ ಅವರು ಕಿಕ್ ಬಾಕ್ಸಿಂಗ್ ತರಬೇತುದಾರರಾಗಿದ್ದಾರೆ. ಇವರ ಯಶಸ್ವಿಗೆ ವಾಕೋ ಇಂಡಿಯಾದ ಅಧ್ಯಕ್ಷ ಸಂತೋಷ್ ಕೆ. ಅರ್ಗವಾಲ್, ವಾಕೋ ಕರ್ನಾಟಕದ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅಭಿನಂದನೆ ಸಲ್ಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *