ಬಂಟ್ವಾಳ: ಸಜೀಪಮೂಡ ಗ್ರಾಮದ ಸುಭಾಷ್ ನಗರ ಹಾಲು ಉತ್ಪಾದಕರ ಸಹಕಾರ ಸಂಘ ನಿ. ದ ವಾರ್ಷಿಕ ಮಹಾಸಭೆಯು ನಡೆಯಿತು.ಸಂಘದ ಅಧ್ಯಕ್ಷ ಹರಿಪ್ರಸಾದ್ ಭಂಡಾರಿ ಎ. ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘವು 5.40.590 ರೂ.ಲಾಭಗಳಿಸಿದ್ದು, ಸದಸ್ಯರಿಗೆ 20 ಶೇ. ಡಿವಿಡೆಂಟ್ ನ್ನು ಘೋಷಿಸಿದರು.

ಸಂಘದ 42 ಕುಟುಂಬಗಳ 164 ಮಂದಿಗೆ ಯಶಸ್ವಿನಿ ಯೋಜನೆಯನ್ನು ಅಳವಡಿಸಲಾಗಿದ್ದು, ಹೆಣ್ಣು ಕರು ಸಾಕಾಣಿಕೆ ಯೋಜನೆ,ಅನಿಲಸ್ತಾವರ ಯೋಜನೆ ಹುಲ್ಲುಕಟಾವು ಯಂತ್ರ ,ಹಾಲು ಕರೆಯುವ ಯಂತ್ರ, ಮಿನಿ ಡೈರಿ ಯೋಜನೆ, ಹುಲ್ಲು ಬೆಳೆಸಲು ಅನುದಾನ, ರಬ್ಬರ್ ಮ್ಯಾಟ್ ಅನುದಾನ,ರಾಸುಗಳಿಗೆ ವಿಮೆ,ಪ್ರೋತ್ಸಾಹ ಧನ ವಿತರಣೆ ಸಹಿತ ವಿವಿಧ ಯೋಜನೆಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಕಾರ್ಯದರ್ಶಿ ರಮೇಶ್ ಅನ್ನಪ್ಪಾಡಿ ವರದಿ ವಾಚಿಸಿದರು.
ನಿರ್ದೇಶಕರುಗಳಾದ ಎಡ್ಮಿನ್ ನೊರೋನಾ, ಬಾಲಕೃಷ್ಣ ಅರಸ, ಜಯ ಕೆ ,ಮಾಧವ ಬೆಳ್ಚಡ ,ಗಣೇಶ್ ಆಳ್ವ ,ಯಶೋಧರ ಕೊಟ್ಟಾರಿ, ಇಕ್ಬಾಲ್ ,ಕಮಲಾಕ್ಷಿ, ಕುಸುಮಾವತಿ, ವಿಜಯ ,ಯಮುನಾ, ಜಯಲಕ್ಷ್ಮಿ, ಉಪಸ್ಥಿತರಿದ್ದರು.
ಇದೇ ವೇಳೆ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಲಲಿತಾ ಬರ್ಕೆ ಇವರನ್ನು ಸನ್ಮಾನಿಸಲಾಯಿತು.
