ಬಂಟ್ವಾಳ: ಮಂಗಳೂರಿನ ಶಕ್ತಿ ವಿದ್ಯಾ ಕೇಂದ್ರದ ಈಜು ಕೊಳದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಸ್ಫರ್ಧೆ 19ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಕಲ್ಲಡ್ಕ  ಶ್ರೀರಾಮ ಪಿಯು ಕಾಲೇಜಿನ ವಿಧ್ಯಾರ್ಥಿನಿ ಅನರ್ಘ್ಯ ಎ ಆರ್ .400 ಮೀ ಫ್ರೀಸ್ಟೈಲ್ ,200 ಮೀ ಇಂಡಿಯುಜುವಲ್ ಮೆಡ್ಲೆ ಮತ್ತು 200 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ 3 ಚಿನ್ನದ ಪದಕಗಳನ್ನು ಪಡೆದು  ಆ. 22 ರಂದು ಬೆಂಗಳೂರಿನ ಧಣಿಸಂದ್ರದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿರುತ್ತಾರೆ.

ಇವರು ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಪೆಕ್ಟರ್  ಬಿ. ಕೆ .ನಾಯ್ಕ್ ರವರ ಶಿಷ್ಯೆಯಾಗಿದ್ದು. ಅಲೋಶಿಯಸ್ ಈಜು ಕೊಳದ ಮುಖ್ಯ ತರಬೇತುದಾರದ ಲೋಕರಾಜ್ ವಿಟ್ಲ ಮತ್ತು ತರಬೇತುದಾರರಾದ  ಸಂಜಯ್ ಮತ್ತು ಗಗನ್ ರವರಿಂದ ತರಬೇತು ಪಡೆಯುತ್ತಿದ್ದಾರೆ. ಬರಿಮಾರು ಅಶೋಕ್ ಕುಮಾರ್  ಮತ್ತು ರೋಹಿಣಿ.ಬಿ ಇವರ ಪುತ್ರಿಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

By Suddi9

Leave a Reply

Your email address will not be published. Required fields are marked *