ಬಂಟ್ವಾಳ: ಮಂಗಳೂರಿನ ಶಕ್ತಿ ವಿಧ್ಯಾ ಕೇಂದ್ರದ ಈಜು ಕೊಳದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಸ್ಫರ್ಧೆ 14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆ ಯ ವಿಧ್ಯಾರ್ಥಿನಿ ಅನನ್ಯ ಎ ಆರ್ .200ಮೀ ಬಟರ್ಫ್ಲೈ ಯಲ್ಲಿ ಚಿನ್ನ, 50 ಮೀ ಮತ್ತು 100 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ ಪಡೆದು ಆ. 22 ರಂದು ಬೆಂಗಳೂರಿನ ಧಣಿಸಂದ್ರದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿರುತ್ತಾರೆ.

ಈಕೆ ರೇಷ್ಮೆ ಇಲಾಖೆಯ ನಿವೃತ್ತ ಇನ್ಸ್ ಎಕ್ಟರ್ ಬಿ.ಕೆ ನಾಯ್ಕ್ ರವರ ಶಿಷ್ಯೆಯಾಗಿದ್ದು,ಅಲೋಶಿಯಸ್ ಈಜು ಕೊಳದ ಮುಖ್ಯ ತರಬೇತುದಾರದ ಲೋಕರಾಜ್ ವಿಟ್ಲ, ತರಬೇತುದಾರರಾದ ಸಂಜಯ್ ಮತ್ತು ಗಗನ್ ರವರಿಂದ ತರಬೇತಿ ಪಡೆಯುತ್ತಿದ್ದಾರೆ.ಬರಿಮಾರ್ ಅಶೋಕ್ ಕುಮಾರ್ ಮತ್ತು ರೋಹಿಣಿ . ಬಿ ಇವರ ಪುತ್ರಿ ಯಾಗಿದ್ದಾಳೆ.
