ಬಂಟ್ವಾಳ : ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ)ಇದರ 7ನೆ ವಾರ್ಷಿಕ ಮಹಾಸಭೆ ಹಾಗೂ 72 ವರ್ಷ ತುಂಬಿದ ಹಿರಿಯ ನಾಗರಿಕರ ಸನ್ಮಾನ ಕಾರ್ಯಕ್ರಮವು ಬು.ಸಿ.ರೋಡಿನ ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಸೋಮಯ್ಯ ಹನೈನಡೆ ಯವರು ಸಭೆಯ ಅಧ್ಯಕ್ಚತೆ ವಹಿಸಿದ್ದರು.ಬೆಂಗಳೂರಿನ ಉದ್ಯಮಿ ರಮೇಶ್ ಬಾಳೆಹಿತ್ಲು ಅವರು ಸಭೆಯನ್ನುಉದ್ಘಾಟಿಸಿ  ಮಾತನಾಡಿ, ನಾವು ವೃದ್ಧರಲ್ಲ, ಹಿರಿಯರು ಎಂದು  ಅರಿತುಕೊಂಡು ಸಮಾಜದ ಕಿರಿಯರಿಗೆ ಮಾರ್ಗದರ್ಶನ ಮಾಡಬೇಕು, ಇಂದಿನ ಯುವಪೀಳಿಗೆಗೆ ಹಿರಿಯರ ಮಾರ್ಗದರ್ಶನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಮೇಶ್ ಸಂಚಯಗಿರಿ,ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರ ಯುವವೇದಿಕೆ ಅಧ್ಯಕ್ಷ ಸುಮಿತ್ ಸಾಲಿಯಾನ್ ಸೋರ್ನಾಡ್  ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ 72 ವರ್ಷ ತುಂಬಿದ ಸಮುದಾಯದ ಹಿರಿಯರಾದ ಪದ್ಮನಾಭ ಎಂ, ಟಿ ಶೇಷಪ್ಪ ಮಾಸ್ಟರ್,ಕೃಷ್ಣಪ್ಪ ಬಡ್ಡಕಟ್ಟೆ,ರಾಮಚಂದ್ರ ಮಾಸ್ಟರ್,ಭೋಜ ಬಂಗೇರ, ಧರ್ಮಣ ಬಡ್ಡಕಟ್ಟೆ, ಗಂಗಾಧರ ಮಾಸ್ಟರ್ ಅವರನ್ನು ಸನ್ಮಾನಿಸಲಾಯಿತು ಹಾಗೂ ಪ್ರತಿಭಾವಂತ ಬಾಲಕಿ ಕು. ಕೃತಿ ಬಿ ಅವರನ್ನು ಅಭಿನಂದಿಸಲಾಯಿತು.


ಉಪಾಧ್ಯಕ್ಷರಾದ ರತ್ನಾವತಿ, ಸಮಿತಿ ಸದಸ್ಯರಾದ ಸೋಮಪ್ಪ ಮೂಲ್ಯ, ಎಂ. ನಾರಾಯಣ ಮಾಸ್ಟರ್, ರಾಮ ಮೂಲ್ಯ, ಶಾಂಭವಿ ಹನೈನಡೆ,ನಾರಾಯಣ ಮುಇಲ್ಯ ಭಂಡಾರಿಬೆಟ್ಟು ಅವರು ಸನ್ಮಾನ ಪತ್ರ ವಾಚಿಸಿದರು.ವೇದಿಕೆಯಲ್ಲಿ ಉಪಾಧ್ಯಕ್ಷರಾದ ವಿಠ್ಠಲ ಮೂಲ್ಯ, ಸ್ಥಾಪಕಧ್ಯಕ್ಷರಾದ ಸುಂದರ್ ಬಿ ಕುಲಾಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶೀನ ಮೂಲ್ಯ, ನೀಲಪ್ಪ ಸಾಲಿಯಾನ್ ಉಪಸ್ಥಿತರಿದ್ದರು.


ಅಗಲಿದ ಸದಸ್ಯರಾದ ಭೋಜ ಮೂಲ್ಯ ಕುರ್ನಾಡ್, ಗೋಪಾಲ ಮಾಸ್ಟರ್ ಇರಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತುಶಾಂಭವಿ ಹನೈನಡೆ ಪ್ರಾರ್ಥಿಸಿದರು. ಜತೆ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿದರು.ಗೌರವಾಧ್ಯಕ್ಷ ಟಿ ಶೇಷಪ್ಪ ಮಾಸ್ಟರ್ ಪ್ರಸ್ತಾವನೆಗೈದರು.ಗೌ.ಪ್ರ. ಕಾರ್ಯದರ್ಶಿ ಶ್ರೀನಿವಾಸ ಖಂಡಿಗ ವರದಿ ವಾಚಿಸಿದರು. ಕೋಶಾಧಿಕಾರಿ ಲೆಕ್ಕಪತ್ರ ಮಂಡಿಸಿದರು.
ಸಂಘಟನಾ ಕಾರ್ಯದರ್ಶಿ ವಿಶ್ವನಾಥ ಸಾಲಿಯಾನ್ ವಂದಿಸಿದರು. ಎಚ್ ಕೆ ನೈನಾಡು ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *