ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.)ದ.ಕ.,ಉಡುಪಿ ಜಿಲ್ಲೆಯ ಬಂಟ್ವಾಳ ವಲಯದ ವತಿಯಿಂದ  ವಲಯದ ಕುಟುಂಬ ಸದಸ್ಯರಿಗಾಗಿ” ಕುಟುಂಬ ಸಮ್ಮಿಲನ ಹಾಗೂ ಆಟಿ ಕೂಟ” ಕಾರ್ಯಕ್ರಮ  ಬಿ.ಸಿ.ರೋಡ್ ನ ಕನ್ನಡ  ಭವನ ದಲ್ಲಿ ನಡೆಯಿತು. 


  ಜೇಸಿ ಪೂರ್ವಧ್ಯಕ್ಷರು, ಉದ್ಯಮಿ  ಸದಾನಂದ ಬಂಗೇರ ರವರು ಆಟಿಯ ತಿನಸು ಕನಿಲೆಯನ್ನು  ಸುಲಿಯುವ ಮೂಲಕ ಕಾರ್ಯಕ್ತಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.ವಲಯಧ್ಯಕ್ಷರಾದ ರಾಜೇಂದ್ರ ಕೆ, ಸಂಪನ್ಮೂಲ ವ್ಯಕ್ತಿ ಜೇಸಿ ನಾಗರಾಜ್ ಬಜಾಲ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ್ , ಜಿಲ್ಲಾ ಕ್ರೀಡಾಕಾರ್ಯದರ್ಶಿ ಹರೀಶ್ ಕುಂದರ್, ಕೋಶಾಧಿಕಾರಿ ಕೃಷ್ಣರಾಜ್ ರಾವ್ ,ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಶರತ್ ಕಲ್ಲಡ್ಕ ಹಾಗೂ ಅಜಿತ್ ಬಂಟ್ವಾಳ ರವರು ಉಪಸ್ಥಿತರಿದ್ದರು.


ಗೌರವಧ್ಯಕ್ಷರಾದ ಕಿಶೋರ್ ಸ್ವಾಗತಿಸಿದರು, ಕಾರ್ಯದರ್ಶಿ ರವಿ ಕಲ್ಪನೆ ವಂದಿಸಿದರು. ದಯಾನಂದ್ ಬಂಟ್ವಾಳ್ ರವರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಾಗರಾಜ್ ಬಜಾಲ್ ರವರು ಸದಸ್ಯರಿಗೆ ವಿವಿಧ ಆಟೋಟ  ಹಾಗು ಮನರಂಜನೆಗಳನ್ನು ನಡೆಸಿಕೊಟ್ಟರು.

By Suddi9

Leave a Reply

Your email address will not be published. Required fields are marked *