ಬಂಟ್ವಾಳ: ಕೊಯಿಲ ಸಮೀಪದ ಹೊರಂಗಳದಲ್ಲಿ ಮೂರು ದಿನಗಳ ಹಿಂದೆ ನೀರು ಹರಿಯುವ ತೋಡಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಜೀವನ್ ಪಿಂಟೋ ಅವರ ನಿವಾಸಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ದುರ್ಘಟನೆಯ ಕುರಿತು ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದು ಅವರು ತೀವ್ರ ಶೋಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರು ಹಾಜರಿದ್ದು,ಸರಕಾರದಿಂದ ಮಂಜೂರಾದ ಪರಿಹಾರದ ಆದೇಶಪತ್ರವನ್ನು ವಿತರಿಸಿದರು.ಸ್ಥಳೀಯ ಮುಖಂಡರಾದ ಸಂತೋಷ್ ರಾಯಿಬೆಟ್ಟು, ವಸಂತ ಅಣ್ಣಳಿಕೆ, ಹರೀಶ್ ಆಚಾರ್ಯ,ಸುದರ್ಶನ್ ಬಜ ಮೊದಲಾದವರು ಉಪಸ್ಥಿತರಿದ್ದರು.
